ತನ್ನ ಬೆಂಬಲಕ್ಕೆ ನಿಂತಿದ್ದು ಪಿಎಫ್ಐ ಒಂದೇ : ಹಾದಿಯಾ

Only PFI Supporting Me Says Hadiya
Highlights

ಮಹತ್ವದ ಸುಪ್ರೀಂ ಕೋರ್ಟ್ ತೀರ್ಪಿನ ಮುಖೇನ ತನ್ನ ವಿವಾಹವನ್ನು ಊರ್ಜಿತಗೊಳಿಸಿ, ಕೇರಳಕ್ಕೆ ಹಿಂದಿರುಗಿರುವ ಹಾದಿಯಾ, ಎರಡು ಮುಸ್ಲಿಂ ಸಂಘಟನೆಗಳನ್ನು ದೂರುವ ಮೂಲಕ ಹೊಸ ವಿವಾದವೊಂದಕ್ಕೆ ಕಾರಣಳಾಗಿದ್ದಾಳೆ.

ಕಲ್ಲಿಕೋಟೆ: ಮಹತ್ವದ ಸುಪ್ರೀಂ ಕೋರ್ಟ್ ತೀರ್ಪಿನ ಮುಖೇನ ತನ್ನ ವಿವಾಹವನ್ನು ಊರ್ಜಿತಗೊಳಿಸಿ, ಕೇರಳಕ್ಕೆ ಹಿಂದಿರುಗಿರುವ ಹಾದಿಯಾ, ಎರಡು ಮುಸ್ಲಿಂ ಸಂಘಟನೆಗಳನ್ನು ದೂರುವ ಮೂಲಕ ಹೊಸ ವಿವಾದವೊಂದಕ್ಕೆ ಕಾರಣಳಾಗಿದ್ದಾಳೆ.

ಶಫೀನ್ ಜಹಾನ್ ಜೊತೆಗಿನ ವಿವಾಹಕ್ಕೆ ಸಂಬಂಧಿಸಿದ ಸಮಸ್ಯೆಗಳ ಸಂದರ್ಭ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಾತ್ರ ತನ್ನ ಬೆಂಬಲಕ್ಕೆ ನಿಂತಿತ್ತು. ಜಮಾತೆ ಇಸ್ಲಾಮಿ ಮತ್ತು ತರ್ಬಿಯ್ಯಾತ್ ಸಹಾಯ ಮಾಡಲು ನಿರಾಕರಿಸಿವೆ ಎಂದು ಹಾದಿಯಾ ಪತ್ರಕರ್ತರೊಂದಿಗೆ ಮಾತನಾಡುತ್ತಾ

ಹೇಳಿದ್ದಾಳೆ. ‘ನಾನು ಇಸ್ಲಾಂ ಸ್ವೀಕರಿಸಬೇಕೆಂದು ಬಯ ಸಿ ಜಮಾತೆ ಇಸ್ಲಾಮಿ ಮತ್ತು ತರ್ಬಿಯ್ಯಾತ್ ಸಹಾಯ ಯಾಚಿಸಿದಾಗ, ಎರಡೂ ಸಂಘಟನೆಗಳು ನನಗೆ ಸಹಾಯ ಮಾಡಲು ನಿರಾಕರಿಸಿದವು. ಸುಪ್ರೀಂಕೋರ್ಟ್‌ನಲ್ಲಿ ಕಾನೂನು ಹೋರಾಟಕ್ಕೆ ನಮ್ಮ ಪರವಾಗಿ ಪಿಎಫ್‌ಐ ಮಾತ್ರ ನಿಂತಿತ್ತು’ ಎಂದು ಹಾದಿಯಾ ತಿಳಿಸಿದ್ದಾಳೆ.

loader