ಅಲ್ಪಸಂಖ್ಯಾತ ಯೋಗದಲ್ಲಿ ಮುಸಲ್ಮಾನರಿಗೆ ಮಾತ್ರವೇ ಏಕೆ ಪ್ರಾಶಸ್ತ್ಯ ನೀಡಲಾಗುತ್ತದೆ ಎಂದು ಕ್ರಿಸ್ಚಿಯನ್ ಸಂಘಟನೆಗಳು ಪ್ರಶ್ನೆ ಮಾಡಿದ್ದು, ಸರ್ಕಾರದ ಧೋರಣೆಯನ್ನು ಖಂಡಿಸಿ ಪ್ರತಿಭಟನೆಗೆ ಇಳಿದಿವೆ. ಅಲ್ಲದೇ ಅಲ್ಪ ಸಂಖ್ಯಾತರಿಂದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಬೆಂಗಳೂರು (ಜ.06): ಅಲ್ಪಸಂಖ್ಯಾತ ಯೋಗದಲ್ಲಿ ಮುಸಲ್ಮಾನರಿಗೆ ಮಾತ್ರವೇ ಏಕೆ ಪ್ರಾಶಸ್ತ್ಯ ನೀಡಲಾಗುತ್ತದೆ ಎಂದು ಕ್ರಿಸ್ಚಿಯನ್ ಸಂಘಟನೆಗಳು ಪ್ರಶ್ನೆ ಮಾಡಿದ್ದು, ಸರ್ಕಾರದ ಧೋರಣೆಯನ್ನು ಖಂಡಿಸಿ ಪ್ರತಿಭಟನೆಗೆ ಇಳಿದಿವೆ. ಅಲ್ಲದೇ ಅಲ್ಪ ಸಂಖ್ಯಾತರಿಂದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಅಲ್ಪಸಂಖ್ಯಾತ ಆಯೋಗವನ್ನು ಸೇರಿಸಿ ಸರ್ಕಾರದ ಶಾಸನಬದ್ಧ ಸಂಸ್ಥೆಗಳಲ್ಲಿ ಕ್ರಿಸ್ಚಿಯನ್ , ಬೌದ್ಧರು, ಜೈನರಿಗೆ ಸೂಕ್ತ ಪ್ರಾತಿನಿದ್ಯ ನೀಡುವಂತೆ ಒತ್ತಾಯಿಸಲಾಗಿದೆ. ಹಿರಿಯ ಐಎಎಸ್ ಅಧಿಕಾರಿ ಕೆ. ಮಥಾಯಿ ಅವರಿಗೂ ಸರ್ಕಾರ ವಿನಾಕಾರಣ ಕಿರುಕುಳ ನೀಡುತ್ತಿದೆ. ನಾಲ್ಕು ತಿಂಗಳ ವೇತನ ನೀಡದೇ ಸತಾಯಿಸುತ್ತಿದೆ ಎಂದು ಆರೋಪಿಸಿ ಪ್ರತಿಭಟನೆಗೆ ಇಳಿದಿವೆ.