ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲಾ ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಇನ್ಮುಂದೆ ಟೀ ಜೊತೆ ಬಿಸ್ಕೇಟ್ ಅಥವಾ ಒಣ ಹಣ್ಣುಗಳು ಮತ್ತು  ಕುಡಿಯುವ ನೀರನ್ನು ಮಾತ್ರ ನೀಡಬೇಕು. ಅವರು ಮಾತನಾಡುವ ಮುನ್ನ ಇಬ್ಬರಿಗಿಂತ ಜಾಸ್ತಿ ಜನ ಮಾತನಾಡುವಂತಿಲ್ಲ. ಇದು ಅಸ್ಸಾಂ ಸರ್ಕಾರ ರೂಪಿಸಿದ ಹೊಸ ನಿಯಮವಾಗಿದೆ.

ಗುವಾಹಟಿ (ಡಿ.17): ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲಾ ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಇನ್ಮುಂದೆ ಟೀ ಜೊತೆ ಬಿಸ್ಕೇಟ್ ಅಥವಾ ಒಣ ಹಣ್ಣುಗಳು ಮತ್ತು ಕುಡಿಯುವ ನೀರನ್ನು ಮಾತ್ರ ನೀಡಬೇಕು. ಅವರು ಮಾತನಾಡುವ ಮುನ್ನ ಇಬ್ಬರಿಗಿಂತ ಜಾಸ್ತಿ ಜನ ಮಾತನಾಡುವಂತಿಲ್ಲ. ಇದು ಅಸ್ಸಾಂ ಸರ್ಕಾರ ರೂಪಿಸಿದ ಹೊಸ ನಿಯಮವಾಗಿದೆ.

ಮುಖ್ಯಮಂತ್ರಿಯವರು ಬಹಳ ಬ್ಯುಸಿ ಇರುವುದರಿಂದ ಅವರು ಭಾಗವಹಿಸುವ ಕಾರ್ಯಕ್ರಮ ಒಂದು ತಾಸಿಗಿಂತ ಹೆಚ್ಚಿರಬಾರದು. ಸಿಎಂ ಒಪ್ಪಿಗೆ ಇಲ್ಲದೇ ಕಾರ್ಯಕ್ರಮವನ್ನು ಒಂದು ತಾಸಿಗಿಂತ ಹೆಚ್ಚು ಮುಂದುವರೆಸಬಾರದು ಎಂದು ಹೊಸ ನಿಯಮ ಹೇಳುತ್ತದೆ.

ವೇದಿಕೆಯ ಮೇಲೆ ಮುಂಭಾಗದ ಸಾಲಿನಲ್ಲಿ ಕೇವಲ 6 ಆಸನಗಳನ್ನು ಮಾತ್ರ ಹಾಕಬೇಕು. ವೇದಿಕೆಯ ಮೇಲೆ 2 ಸಾಲುಗಳಿಗಿಂತ ಹೆಚ್ಚಿರಬಾರದು. ಮೊದಲ ಹಾಗೂ ಎರಡನೇ ಸಾಲಿನ ನಡುವೆ 4 ಅಡಿಗಿಂತ ಕಡಿಮೆ ಅಂತರವಿರಬಾರದು ಎಂದಿದೆ.