ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.4ರಷ್ಟು ಕಡಿಮೆ ಎಂದು ಕೇಂದ್ರ ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ, ಕೇಂದ್ರೀಯ ಜಲ ಆಯೊಗದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದು ಕಳೆದ 10 ವರ್ಷಗಳಲ್ಲಿಯೇ ದಕ್ಷಿಣ ಭಾರತದ ಜಲಾಶಯಗಳಲ್ಲಿನ ಅತಿ ಕಡಿಮೆ ನೀರಿನ ಸಂಗ್ರಹವಾಗಿದೆ.
ಚೆನ್ನೈ(ಏ.29): ತೀವ್ರ ಬರದಿಂದ ತತ್ತರಿಸಿರುವ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಪ್ರಮುಖ 31 ಜಲಾಶಯಗಳಲ್ಲಿ ಶೇ.10ರಷ್ಟು ಮಾತ್ರ ನೀರಿನ ಸಂಗ್ರಹವಿದೆ. ಏ.27ರ ವರೆಗಿನ ಮಾಪನದಲ್ಲಿ ಜಲಾಶಯಗಳಲ್ಲಿ 51.59 ಬಿಎಂಸಿ (ಬಿಲಿಯನ್ ಕ್ಯುಬಿಕ್ ಮೀಟರ್) ನೀರಿನ ಸಂಗ್ರಹ ದಾಖಲಾಗಿವಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.4ರಷ್ಟು ಕಡಿಮೆ ಎಂದು ಕೇಂದ್ರ ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ, ಕೇಂದ್ರೀಯ ಜಲ ಆಯೊಗದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದು ಕಳೆದ 10 ವರ್ಷಗಳಲ್ಲಿಯೇ ದಕ್ಷಿಣ ಭಾರತದ ಜಲಾಶಯಗಳಲ್ಲಿನ ಅತಿ ಕಡಿಮೆ ನೀರಿನ ಸಂಗ್ರಹವಾಗಿದೆ.
ಜಲಾಶಯಗಳಲ್ಲಿರುವ ಶೇ.10ರಷ್ಟು ನೀರಿನ ಸಂಗ್ರಹದಲ್ಲಿ 4.95 ಬಿಸಿಎಂ ನೀರು ಮಾತ್ರ ಬಳಕೆಗೆ ಲಭ್ಯವಿರುವ ನೀರಾಗಿದೆ. ಇದೇ ಅವಯಲ್ಲಿ ಕಳೆದ ವರ್ಷ ಜಲಾಶಯಗಳಲ್ಲಿ ಶೇ.14ರಷ್ಟು ನೀರಿನ ಸಂಗ್ರಹವಿತ್ತು. ಕಳೆದ 10 ವರ್ಷಗಳ ಸರಾಸರಿಗೆ ಹೋಲಿಸಿದರೆ ಈ ಅವಯಲ್ಲಿ ಜಲಾಶಯಗಳಲ್ಲಿ ಶೇ.21ರಷ್ಟು ನೀರಿನ ಸಂಗ್ರಹವಿತ್ತು.
