ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಿ ಆಗಲು ಹೆಚ್ಚಿನ ಮಂದಿ ಬಯಸಿದ್ದಾರೆ ಎಂದು ಆನ್‌ಲೈನ್ ಸಮೀಕ್ಷೆಯೊಂದು ತಿಳಿಸಿದೆ.

ಡೈಲಿಹಂಟ್ ಮತ್ತು ನೀಲ್ಸನ್ ನಡೆಸಿದ ಆನ್‌ಲೈನ್ ಸಮೀಕ್ಷೆಯ ಪ್ರಕಾರ ಶೇ.63 ರಷ್ಟು ಮಂದಿ ಮೋದಿ ಅವರ ಮೇಲೆ ನಂಬಿಕೆ ಇಟ್ಟಿದ್ದಾರೆ. ಅಲ್ಲದೇ 2014ರಲ್ಲಿ ಮೋದಿ ಅವರ ಮೇಲೆ ಇಟ್ಟ ನಂಬಿಕೆಯನ್ನೂ ಇಗಲೂ ಹೊಂದಿದ್ದಾರೆ.

ಶೇ.50ಕ್ಕೂ ಹೆಚ್ಚು ಜನರು ಮೋದಿ ಅವರು ಎರಡನೇ ಅವಧಿಗೆ ಪ್ರಧಾನಿ ಆಗುವುದರಿಂದ ದೇಶಕ್ಕೆ ಉತ್ತಮ ಭವಿಷ್ಯ ಒದಗಿಸಬಲ್ಲರು ಎಂದು
ಅಭಿಪ್ರಾಯಪಟ್ಟಿದ್ದಾರೆ. ಸದ್ಯದಲ್ಲೇ ನಡೆಯಲಿರುವ ಐದು ರಾಜ್ಯಗಳ ಚುನಾವಣೆಗೆ ಸಂಬಂಧಿಸಿದಂತೆ, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು  ಛತ್ತೀಸ್ ಗಢಗಳಲ್ಲಿ ಜನರು ಮೋದಿ ಅವರ ಮೇಲೆ ವಿಶ್ವಾಸ ಇಟ್ಟಿದ್ದಾರೆ. 

ತೆಲಂಗಾಣ ಮತ್ತು ಮಿಜೋರಂಗಳಲ್ಲಿ ಮಾತ್ರ ಪರಿಸ್ಥಿತಿ ಭಿನ್ನವಾಗಿದೆ ಎಂದು ಸಮೀಕ್ಷೆ ತಿಳಿಸಿದೆ. ರಾಷ್ಟ್ರೀಯ ಬಿಕ್ಕಟ್ಟು ಎದುರಾದ ಸಂದರ್ಭದಲ್ಲಿ ದೇಶವನ್ನು ಮುನ್ನಡೆಸಲು ಮೋದಿ ಅತ್ಯಂತ ಸೂಕ್ತ ವ್ಯಕ್ತಿ ಎಂದು ಶೇ. 62 ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ನಂತರದಲ್ಲಿ ರಾಹುಲ್ ಗಾಂಧಿ (ಶೇ.17 ) ಇದ್ದಾರೆ.