ರೈಲ್ವೆ ಇಲಾಖೆಯಿಂದ ಕರೆಯಲಾಗಿದ್ದ 9739 ಆರ್‌ಪಿಎಫ್‌ ಪೇದೆ ಹಾಗೂ ಎಸ್ ಐ  ಹುದ್ದೆಗಳ ನೇಮಕಾತಿಗೆ ಆನ್ ಲೈನ್ ರಿಜಿಸ್ಟ್ರೇಶನ್ ಪ್ರಕ್ರಿಯೆಯನ್ನು ಆರಂಭ ಮಾಡಲಾಗಿದೆ. 

ನವದೆಹಲಿ : ರೈಲ್ವೆ ಇಲಾಖೆಯಿಂದ ಕರೆಯಲಾಗಿದ್ದ 9739 ಆರ್‌ಪಿಎಫ್ ಪೇದೆ ಹಾಗೂ ಎಸ್‌ಐ ಹುದ್ದೆಗಳ ನೇಮಕಾತಿಗೆ ಆನ್ ಲೈನ್ ರಿಜಿಸ್ಟ್ರೇಶನ್ ಪ್ರಕ್ರಿಯೆಯನ್ನು ಆರಂಭ ಮಾಡಲಾಗಿದೆ. 

ಒಟ್ಟು 4403 ಪುರುಷ ಹಾಗೂ 4216 ಮಹಿಳೆಯರನ್ನು ಪೇದೆ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಇನ್ನು ಎಸ್ ಐ ಹುದ್ದೆಗೆ 819 ಪುರುಷ ಹಾಗೂ 301 ಮಹಿಳೆಯರ ನೇಮಕಾತಿ ನಡೆಯುತ್ತಿದೆ. 

http://www.rpfonlinereg.co.in ವೆಬ್‌ಸೈಟ್‌ ಗೆ ಭೇಟಿ ನೀಡಿ ಇಲ್ಲಿ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಬಹುದು. 

ಜೂನ್ 1 ರಿಂದಲೇ ರಿಜಿಸ್ಟ್ರೇಶನ್ ಪ್ರಕ್ರಿಯೆ ಆರಂಭವಾಗಿದ್ದು, ಜೂನ್ 30ಕ್ಕೆ ಮುಗಿಯಲಿದೆ. ಪರೀಕ್ಷೆಯು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ನಡೆಯಲಿದೆ. 

ಒಬಿಸಿ ವರ್ಗಕ್ಕೆ 500 ರು ಶುಲ್ಕವಿದ್ದು, 400 ರು ರೀಫಂಡ್ ಆಗಲಿದೆ. ಇನ್ನು 250 ರು. ಶುಲ್ಕ ಎಸ್‌ಸಿ, ಎಸ್‌ಟಿ ವರ್ಗಕ್ಕೆ ಇದ್ದು ಸಂಪೂರ್ಣ ಹಣವು ರೀಫಂಡ್ ಆಗಲಿದೆ. 

ವಯೋ ಮಿತಿ

ಪೇದೆ - 18 - 25
ಸಬ್ ಇನ್ಸ್‌ಪೆಕ್ಟರ್ 20 - 25