ಶಾಸಕರು ಮಾ.18 ರಂದು ವಿದೇಶಿ ಪ್ರವಾಸದಲ್ಲಿದ್ದಾಗ ಹ್ಯಾಕ್ ಮೂಲಕ ಹಣ ಡ್ರಾ ಮಾಡಲಾಗಿದೆ
ಬೆಂಗಳೂರು(ಮಾ.24): ನಟ ಹಾಗೂ ಹಾಲಿ ಚನ್ನಪಟ್ಟಣ ಶಾಸಕ ಸಿ.ಪಿ. ಯೋಗೀಶ್ವರ್ ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕಿರುವ ಸೈಬರ್ ಕಳ್ಳರು 1.95 ಲಕ್ಷ ರೂ. ದೋಚಿದ್ದಾರೆ.
ಯೋಗೀಶ್ವರ್ ಅವರ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಬ್ಯಾಂಕಿನ ಖಾತೆ ಹ್ಯಾಕ್ ಮಾಡಿರುವ ಹ್ಯಾಕರ್ಸ್'ಗಳು ಮಹಾರಾಷ್ಟ್ರದ ಪುಣೆ ಹಾಗೂ ಮುಂಬೈನಲ್ಲಿ ಒಟ್ಟು 1.95,345 ರೂ. ಹಣ ಡ್ರಾ ಮಾಡಿದ್ದಾರೆ. ಶಾಸಕರು ಮಾ.18 ರಂದು ವಿದೇಶಿ ಪ್ರವಾಸದಲ್ಲಿದ್ದಾಗ ಹ್ಯಾಕ್ ಮೂಲಕ ಹಣ ಡ್ರಾ ಮಾಡಲಾಗಿದೆ. ಬನಶಂಕರಿ ಠಾಣೆಗೆ ಶಾಸಕ ಯೋಗೀಶ್ವರ್ ಅವರು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.
