ಬೆಂಗಳೂರು(ಅ.3): ಸಿಲಿಕಾನ್​ ಸಿಟಿ ದಿನದಿಂದ ದಿನಕ್ಕೆ ಹೈಟೆಕ್ ಮೇಲೆ ಹೈಟೆಕ್ ಆಗುತ್ತಿದೆ. ಜನಸಂಖ್ಯೆ ಹೆಚ್ಚಾಗಿರುವ ಕಾರಣ ಮೃತಪಡುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಮೃತಪಟ್ಟವರ ಸಂಬಂಧಿಕರು ಶವಸಂಸ್ಕಾರ ಮಾಡಲು ಕೆಲವೊಮ್ಮೆ ಕ್ಯೂ ನಿಲ್ಲಬೇಕಾಗುತ್ತದೆ. ತಮ್ಮವರನ್ನು ಕಳೆದುಕೊಂಡು ದುಃಖದಲ್ಲಿರುವವರಿಗೆ ಶವಸಂಸ್ಕಾರ ಕ್ಯೂ ನಿಲ್ಲುವುದೊಂದು ಗೋಳು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಬಿಎಂಪಿ ಈ ಗೋಳಿಗೆ ಫುಲ್​ಸ್ಟಾಪ್ ಹಾಕಲು ನಿರ್ಧರಿಸಿದೆ. ಇನ್ಮುಂದೆ ಶವಸಂಸ್ಕಾರ ಮಾಡುವವರು ಆನ್​ಲೈನ್ ಬುಕ್ಕಿಂಗ್ ಮೂಲಕ ಶವಸಂಸ್ಕಾರವನ್ನು ಮಾಡಬಹುದು.ಬಿಬಿಎಂಪಿ ಆ್ಯಪ್ ಮೂಲಕ ಶವಸಂಸ್ಕಾರವನ್ನು ಮೊದಲೇ ನಿರ್ಧರಿಸಬಹುದು. ಆ್ಯಪ್'ನಲ್ಲಿ ಹೆಸರು,ವಿಳಾಸ, ಸಮಯ, ಸಾವಿನ ಕಾರಣ ನೀಡಬೇಕು. ಇದರಲ್ಲಿ 400 ಸ್ಮಶಾನ, 11 ಚಿತ್ತಾಗಾರದ ಬಗ್ಗೆ ಮಾಹಿತಿ ಸಿಗಲಿದೆ. ಸ್ಮಶಾನಕ್ಕೆ ಹೋಗೋ ಮುನ್ನವೇ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಬಹುದು.

ವಿದ್ಯುತ್ ಲಭ್ಯತೆ ಬಗ್ಗೆಯೂ ಮೊದಲೇ ನಿಖರ ಮಾಹಿತಿ ಸಿಗಲಿದೆ. ಮುಂದಿನ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಿದ ನಂತರ ಸಾರ್ವಜನಿಕರಿಗೆ ಈ ಆ್ಯಪ್ ಲಭ್ಯವಾಗಲಿದೆ.