Asianet Suvarna News Asianet Suvarna News

ಈರುಳ್ಳಿ ಬೆಲೆ ಭಾರೀ ಕುಸಿತ: ಬಂಪರ್ ಬೆಳೆ ತೆಗೆದ ರೈತನ ಕಣ್ಣಲ್ಲಿ ನೀರು!

Onion Price Decreased Faremers Are In Tear

ಹುಬ್ಬಳ್ಳಿ(ಸೆ.15): ಮಳೆ ಕೊರತೆ ಮಧ್ಯೆ ಬಂಪರ್ ಈರುಳ್ಳಿ ಬೆಳೆ. ಆದರೆ ರೈತರಿಗೆ ಮಾತ್ರ ಬಾರೀ ನಿರಾಸೆ. ಇದಕ್ಕೆಲ್ಲಾ ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿದ್ದರಿಂದ ಉಳ್ಳಗಡ್ಡಿಯನ್ನೇ ನಂಬಿದ್ದ ಅನ್ನದಾತನಿಗೆ ಕಣ್ಣೀರು ತರಿಸಿದೆ.

ರಾಜ್ಯದಲ್ಲಿ ಮುಂಗಾರು ವೈಫಲ್ಯವಾಗಿದೆ, ಬಾಗಲಕೋಟೆ, ಬೆಳಗಾವಿ ಹಾಗೂ ಕೊಪ್ಪಳ ಜಿಲ್ಲೆಗಳ ನೀರಾವರಿ ಪ್ರದೇಶದ ರೈತರು ಅಲ್ಪ ನೀರಿನಲ್ಲೂ ಬಂಫರ್ ಈರುಳ್ಳಿ ಬೆಳೆದಿದ್ದಾರೆ. ಇದರಿಂದಾಗಿ ಎಕರೆಗೆ 80 ರಿಂದ 90 ಚೀಲದಂತೆ ಇಳುವರಿಯೂ ಬಂದಿತ್ತು. ಆದ್ರೆ ಮಾರುಕಟ್ಟೆಯಲ್ಲಿ ಮಾತ್ರ ಉತ್ತಮ ಬೆಲೆಯಿಲ್ಲ. ಕಳೆದ ಬಾರೀ ಕ್ವಿಂಟಲ್‌ಗೆ ಈರುಳ್ಳಿ  4 ಸಾವಿರದಿಂದ 5 ಸಾವರವರೆಗೆ ಮಾರಾಟವಾಗಿತ್ತು. ಆದರೀಗ 300 ರೂಪಾಯಿಗೆ ಕುಸಿದಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.

ಇನ್ನೂ ಸಾಲಸೋಲ ಮಾಡಿ ಈರುಳ್ಳಿ ಬೆಳೆದ ರೈತರಿಗೆ ಮಾರುಕಟ್ಟೆಯಲ್ಲಿನ ಬೆಲೆಯಿಂದ ಮಾಡಿದ ಖರ್ಚು ಸರಿದೂಗಿಸುವುದು ಕಷ್ಟವಾಗಿದೆ. ಇನ್ನೊಂದಡೆ ಹೊರ ಜಿಲ್ಲೆಗಳ ಈರುಳ್ಳಿ ಸಾಗಿಸಲು ಪ್ರತಿ ಚೀಲಕ್ಕೆ 150ರಿಂದ 200ರೂಪಾಯಿ ವ್ಯಯಿಸಬೇಕಿದೆ. ಹೀಗಾಗಿ ಈರುಳ್ಳಿ ಮಾರಾಟದಿಂದ ಬಂದ ಹಣ ಸಾಗಾಟಕ್ಕೆ ಸಾಕಾಗುವುದಿಲ್ಲ ಅಂತಾರೆ ರೈತರು.

ಒಟ್ಟಾರೆ ಮುಂಗಾರು ವೈಫಲ್ಯದ ಮಧ್ಯೆಯೂ ಕಷ್ಟುಪಟ್ಟು ಈರುಳ್ಳಿ ಬೆಳೆದ ರೈತರಿಗೆ ಈ ಬಾರೀ ಮತ್ತೆ ನಿರಾಸೆಯಾಗಿದೆ. ಕೂಡಲೇ ಸರ್ಕಾರ ಬೆಂಬಲ ಬೆಲೆ ಘೋಷಿಸಲಿ ಅನ್ನೋದು ರೈತರ ಆಗ್ರಹವಾಗಿದೆ.

Latest Videos
Follow Us:
Download App:
  • android
  • ios