ಇದುವರೆಗೆ ಒಂದು ಕಂಪನಿ ಸಾಮಾನ್ಯ ಮಾರುಕಟ್ಟೆಯಲ್ಲಿ ಒಂದು ವಸ್ತುವನ್ನು ಒಂದು ಎಂಆರ್'ಪಿ(ಗರಿಷ್ಠ ಚಿಲ್ಲರೆ ಮಾರಾಟ ದರ)ಗೆ ಮಾರಾಟ ಮಾಡುತ್ತಿದ್ದರೆ ಅದೇ ವಸ್ತುವನ್ನು ಏರ್'ಪೋರ್ಟ್ , ಮಾಲ್ ಸೇರಿದಂತೆ ಜನ ಹೆಚ್ಚು ಬೆಲೆ ತೆರಲು ಸಿದ್ಧರಿರುವ ಪ್ರದೇಶಗಳಲ್ಲಿ ಬೇರೊಂದು ದರಕ್ಕೆ ಮಾರಾಟ ಮಾಡುತ್ತಿತ್ತು.

ನವದೆಹಲಿ(ಜು.01): ವಿಮಾನ ನಿಲ್ದಾಣ, ಮಾಲ್'ಗಳು ಮತ್ತು ಸಿನಿಮಾ ಮಂದಿರಗಳಲ್ಲಿ ಮಾರಾಟ ಮಾಡಲಾಗುವ ವಸ್ತುಗಳಿಗೆ ಬೇರೆಡೆಗಿಂತ ಹೆಚ್ಚಿನ ದರ ವಿಧಿಸುವುದನ್ನು ಎಲ್ಲರೂ ಗಮನಿಸಬಹುದು. ಆದರೆ ಕಂಪನಿಗಳ ಇಂತ ಆಟಾಟೋಪಕ್ಕೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದ್ದು,ಇನ್ನು ಮುಂದೆ ಒಂದು ವಸ್ತು ಒಂದೇ ಬೆಲೆ ನೀತಿಯನ್ನು ದೇಶಾದ್ಯಂತ ಜಾರಿಗೆ ತರಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಅಂದರೆ ಇದುವರೆಗೆ ಒಂದು ಕಂಪನಿ ಸಾಮಾನ್ಯ ಮಾರುಕಟ್ಟೆಯಲ್ಲಿ ಒಂದು ವಸ್ತುವನ್ನು ಒಂದು ಎಂಆರ್'ಪಿ(ಗರಿಷ್ಠ ಚಿಲ್ಲರೆ ಮಾರಾಟ ದರ)ಗೆ ಮಾರಾಟ ಮಾಡುತ್ತಿದ್ದರೆ ಅದೇ ವಸ್ತುವನ್ನು ಏರ್'ಪೋರ್ಟ್ , ಮಾಲ್ ಸೇರಿದಂತೆ ಜನ ಹೆಚ್ಚು ಬೆಲೆ ತೆರಲು ಸಿದ್ಧರಿರುವ ಪ್ರದೇಶಗಳಲ್ಲಿ ಬೇರೊಂದು ದರಕ್ಕೆ ಮಾರಾಟ ಮಾಡುತ್ತಿತ್ತು. ಆದರೆ ಸಂಪ್ರದಾಯಕ್ಕೆ ಬ್ರೇಕ್ ಹಾಕಿರುವ ಸರ್ಕಾರ 2018ರ ಜ.1ರಿಂದ ಎಲ್ಲಾ ಉತ್ಪನ್ನಗಳು ಒಂದೇ ಎಂಆರ್'ಪಿ ಹೊಂದಿರಬೇಕು ಎಂದು ಸೂಚಿಸಿದೆ.