ಬೆಂಗಳೂರು [ಜು.20] : ರಾಜ್ಯ ರಾಜಕೀಯದಲ್ಲಿ ಪ್ರಹಸನ ಮುಂದುವರಿದಿದ್ದು, ಇದೇ ವೇಳೆ ಮೈತ್ರಿ ಪಾಳಯಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಮತ್ತೋರ್ವ ಕೈ ಶಾಸಕ ಏಕಾ ಏಕಿ ಮುಂಬೈಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ. 

"

ಹೃದಯಾಘಾತದಿಂದ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಮುಂಬೈಗೆ ತೆರಳಿದ್ದಾರೆ ಎನ್ನುವ ಶಂಕೆ ಮೂಡಿದೆ. 

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಳೆದೊಂದು ವಾರದಿಂದ ಆಸ್ಪತ್ರೆಯಲ್ಲಿದ್ದ ಶಾಸಕ ನಾಗೇಂದ್ರ ಕಳೆದ ರಾತ್ರಿಯಿಂದ ನಾಪತ್ತೆಯಾಗಿದ್ದಾರೆ. ಈಗಾಗಲೇ 15 ಮೈತ್ರಿ ಶಾಸಕರು ಅತೃಪ್ತರಾಗಿ ಮುಂಬೈ ಸೇರಿದ್ದು, ಈ ಸಾಲಿಗೆ ಸೇರಿದರಾ ಎನ್ನುವ ಅನುಮಾನ ಮೂಡಿದೆ. 

ಇದರಿಂದ ಮೈತ್ರಿ ಪಾಳಯದ ಬೆಂಬಲ ಮತ್ತಷ್ಟು ಇಳಿದಂತಾಗಿದೆ.