ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶುಗಳ ಸರಣಿ ಸಾವು ಪ್ರಕರಣ ಮಾಸುವ ಮುನ್ನವೇ ಈಗ ಮತ್ತೊಂದು ಶಿಶು ಸಾವನ್ನಪ್ಪಿದೆ. ಮಗುವಿಗೆ ಕಳೆದ 3 ದಿನಗಳಿಂದ ಐಸಿಯುನಲ್ಲಿಯೇ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇವತ್ತು ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ.
ಕೋಲಾರ: ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶುಗಳ ಸರಣಿ ಸಾವು ಪ್ರಕರಣ ಮಾಸುವ ಮುನ್ನವೇ ಈಗ ಮತ್ತೊಂದು ಶಿಶು ಸಾವನ್ನಪ್ಪಿದೆ.
ಮಗುವಿಗೆ ಕಳೆದ 3 ದಿನಗಳಿಂದ ಐಸಿಯುನಲ್ಲಿಯೇ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇವತ್ತು ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ.
ಮೃತ ಮಗು ಮಾಲೂರು ತಾಲೂಕಿನ ನೋಟವೆ ಗ್ರಾಮದ ತಿಮ್ಮರಾಯಪ್ಪ ದಂಪತಿಯ ಮಗು ಆಗಿದ್ದು, ಮಗು ಗರ್ಭದಲ್ಲಿಯೇ ನೀರು ಕುಡಿದಿತ್ತು. ನೀರು ತೆಗೆಯುವ ಉದ್ದೇಶದಿಂದ ಮಗುವಿಗೆ ಐಸಿಯುನಲ್ಲಿ ಇಟ್ಟು ವಿಶೇಷ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ ಏಕಾಏಕಿ ಇವತ್ತೂ ಮಗು ಸಾವನ್ನಪ್ಪಿದೆ. ಶಿಶುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
