ವೇಲಾಯುದನ್ ಬಂಧಿತ ಆರೋಪಿ. ಇನ್ನಿಬ್ಬರು ಆರೋಪಿಗಳಾದ ಸುಂದರ್ ರಾಜ್ ಅನಂತ್ ಕಿಶೋರ್ ಪರಾರಿಯಾಗಿದ್ದಾರೆ.
ಬೆಂಗಳೂರು(ಅ.04): ಸುವರ್ಣ ನ್ಯೂಸ್ ಸೋದರ ಸಂಸ್ಥೆ ಏಷ್ಯಾ'ನೆಟ್ ವರದಿಗಾರ್ತಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಟ್'ಫೀಲ್ಡ್ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ವೇಲಾಯುದನ್ ಬಂಧಿತ ಆರೋಪಿ. ಇನ್ನಿಬ್ಬರು ಆರೋಪಿಗಳಾದ ಸುಂದರ್ ರಾಜ್ ಅನಂತ್ ಕಿಶೋರ್ ಪರಾರಿಯಾಗಿದ್ದಾರೆ. ಸೆಪ್ಟೆಂಬರ್ 27 ರಂದು ವೈಟ್ ಫೀಲ್ಡ್ ನ ಕೆಟಿಪಿಓ ದಲ್ಲಿ ವರದಿಗಾರ್ತಿ ರೋಷಿಣಿ ಜಾಕೋಬ್ ಖಾಸಗಿ ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಚಿವ ಶಶಿತರೂರ್ ಸಂದರ್ಶನಕ್ಕೆ ತೆರಳಿದ್ದ ವರದಿಗಾರ್ತಿ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದರು. ಪೊಲೀಸರು ಉಳಿದ ಇಬ್ಬರಿಗಾಗಿ ಶೋಧ ನಡೆಸುತ್ತಿದ್ದಾರೆ.
