ಆರೋಪಿ ತಯಾರಿಸಿಕೊಟ್ಟ ನಕಲಿ ಅಂಕಪಟ್ಟಿ ಪಡೆದು ಕೆಲ ವಿದ್ಯಾರ್ಥಿಗಳು ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಪಡೆದಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸೀಟು ಪಡೆದಿರುವ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಲಾಗುವುದು. ಆರೋಪಿಯಿಂದ ಕೃತ್ಯಕ್ಕೆ ಬಳಸಿರುವ ಕಂಪ್ಯೂಟರ್‌ ಜಪ್ತಿ ಮಾಡಲಾಗಿದ್ದು, ಅದರಲ್ಲಿನ ಮಾಹಿತಿ ಪರಿಶೀಲನೆ ನಡೆಸಲಾಗುತ್ತಿದೆ.

ಬೆಂಗಳೂರು(ಏ.14): ನಕಲಿ ಅಂಕಪಟ್ಟಿಹಾಗೂ ತಾತ್ಕಾಲಿಕ ಪ್ರಮಾಣ ಪತ್ರ ನೀಡಿ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಕಾಲೇಜು ಗಳಲ್ಲಿ ಸೀಟು ಕೊಡಿಸುತ್ತಿದ್ದ ಬಿಹಾರ ಮೂಲದ ಆರೋಪಿಯನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಮಾನ್ಯತಾ ಗೇಟ್‌ ಪಿನಾಕಿಲ್‌ ಅಪಾರ್ಟ್‌ಮೆಂಟ್‌ ನಿವಾಸಿ ಕುನಾಲ್‌ಕುಮಾರ್‌ ಮಂ ಡಲ್‌ (28) ಬಂಧಿತ ವ್ಯಕ್ತಿ. ಪ್ರಕರಣದ ಮತ್ತೊಬ್ಬ ಆರೋಪಿ ಕುನಾಲ್‌ಕುಮಾರ್‌ನ ಸ್ನೇಹಿತ ಕುಶಾಲ್‌ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಬಂಧಿತನು ಬಿಹಾರ ಮೂಲದವನಾಗಿದ್ದು, ಕಳೆದ ಹಲವು ವರ್ಷಗಳಿಂದ ನಗರದಲ್ಲಿ ನೆಲೆ ಸಿದ್ದ. ಈತ ನಗರದ ಡಿಕೆನ್‌ಸನ್‌ ರಸ್ತೆಯಲ್ಲಿರುವ ಮಣಿಪಾಲ್‌ ಸೆಂಟರ್‌ ಕಟ್ಟಡದಲ್ಲಿ ‘ಜಾಯಿನ್‌ ಅಸ್‌' ಎಂಬ ಹೆಸರಿನಲ್ಲಿ 2013ರಿಂದ ಕಚೇರಿ ಹೊಂದಿದ್ದ. ಆರೋಪಿ ಪ್ರತಿಷ್ಠಿತ ಕಾಲೇಜುಗಳ ನಕಲಿ ಇ-ಮೇಲ್‌ ವಿಳಾಸ ಸೃಷ್ಟಿಸುತ್ತಿದ್ದ. ಕಾಲೇಜು ಪ್ರವೇಶದ ವೇಳೆ ಕುನಾಲ್‌ಕುಮಾರ್‌ ವಿದ್ಯಾರ್ಥಿಗಳನ್ನು ಸಂಪರ್ಕಿಸುತ್ತಿದ್ದ. ತನ್ನನ್ನು ಸಂಪರ್ಕಿಸುತ್ತಿದ್ದ ವಿದ್ಯಾರ್ಥಿ ಹಾಗೂ ಪೋಷಕರಿಗೆ ತಾವು ಕಡಿಮೆ ಅಂಕ ಪಡೆದಿದ್ದು, ಸೀಟು ಸಿಗುವುದು ಕಷ್ಟ, ಆದರೆ ಸೀಟು ಕೊಡಿಸಲು ಬೇಕಾದ ನಕಲಿ ಅಂಕಪಟ್ಟಿಮತ್ತು ಪ್ರಮಾಣ ಪತ್ರಗಳನ್ನು ಕೊಡಿಸುತ್ತೇನೆ ಎಂದು ಹೇಳುತ್ತಿದ್ದ. ತಲಾ ವಿದ್ಯಾರ್ಥಿಗೆ ಸೀಟು ಕೊಡಿಸಲು . 2 ಲಕ್ಷ ನಿಗದಿಪಡಿಸಿದ್ದ. ಅದರಂತೆ ವಿದ್ಯಾರ್ಥಿಗಳಿಗೆ ನಕಲಿ ಅಂಕಪಟ್ಟಿತಯಾರಿಸಿ ಕೊಡುತ್ತಿದ್ದ. ಬಳಿಕ ವಿದ್ಯಾರ್ಥಿಗಳಿಗೆ ನಕಲಿ ಕಾಲೇಜು ಇ-ಮೇಲ್‌ ವಿಳಾಸದಿಂದಲೇ ತಾವು ಸೀಟು ಪಡೆಯಲು ಅರ್ಹವಿರುವುದಾಗಿ ಸಂದೇಶ ಕಳುಹಿಸಿ ಹಣ ಪಡೆಯುತ್ತಿದ್ದ. ಕಾಲೇಜು ಪ್ರವೇಶಾತಿ ಪ್ರಕ್ರಿಯೆ ವೇಳೆ ಕುನಾಲ್‌ ಕುಮಾರ್‌ ಕಾಲೇಜುಗಳ ಮಾಹಿತಿ ಮುದ್ರಿಸಿ ಕರಪತ್ರ ಹಂಚಿಸುತ್ತಿದ್ದ. ಇದರಲ್ಲಿ ಕುನಾಲ್‌ ಕುಮಾರ್‌ ಮೊಬೈಲ್‌ ಸಂಖ್ಯೆ ಇರುತ್ತಿತ್ತು. ಇದನ್ನು ನೋ ಡಿದ ವಿದ್ಯಾರ್ಥಿ ಹಾಗೂ ಪೋಷಕರು ಆರೋ ಪಿಯನ್ನು ಸಂಪರ್ಕಿಸುತ್ತಿದ್ದರು. 
ಕಾಲೇಜಿನಲ್ಲಿಕೆಲಸಕ್ಕಿದ್ದ

ಬಂಧಿತ ಕೆಲ ವರ್ಷಗಳ ಹಿಂದೆ ತುಮಕೂರು ರಸ್ತೆಯಲ್ಲಿರುವ ಪಿಎನ್‌ಆರ್‌ ಕಾಲೇಜಿನಲ್ಲಿ ಕೆಲಸಕ್ಕಿದ್ದ. ಪ್ರವೇಶ ಪ್ರಕ್ರಿಯೆಯ ಕೆಲಸ ನೋಡಿಕೊಳ್ಳುತ್ತಿದ್ದ. ಈಬಗ್ಗೆ ತಿಳಿದಿದ್ದ ಆರೋಪಿ ಅಂಕಪಟ್ಟಿ, ಇನ್ನಿತರ ವಿಷಯದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದ. 

ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು

ಆರೋಪಿ ತಯಾರಿಸಿಕೊಟ್ಟ ನಕಲಿ ಅಂಕಪಟ್ಟಿ ಪಡೆದು ಕೆಲ ವಿದ್ಯಾರ್ಥಿಗಳು ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಪಡೆದಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸೀಟು ಪಡೆದಿರುವ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಲಾಗುವುದು. ಆರೋಪಿಯಿಂದ ಕೃತ್ಯಕ್ಕೆ ಬಳಸಿರುವ ಕಂಪ್ಯೂಟರ್‌ ಜಪ್ತಿ ಮಾಡಲಾಗಿದ್ದು, ಅದರಲ್ಲಿನ ಮಾಹಿತಿ ಪರಿಶೀಲನೆ ನಡೆಸಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ನಕಲಿ ಅಂಕಪಟ್ಟಿತಯಾರಿಸುತ್ತಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ. ಹೆಚ್ಚಿನ ಮಾಹಿತಿಗಾಗಿ ಆರೋಪಿಯನ್ನು ವಿಚಾರಣೆಗೊಳ ಪಡಿಸಲಾಗಿದೆ ಎಂದು ಸಿಸಿಬಿ ಅಧಿಕಾರಿಯೊಬ್ಬರು ಸುವರ್ಣ ನ್ಯೂಸ್ ಸೋದರ ಪತ್ರಿಕೆ ‘ಕನ್ನಡಪ್ರಭಕ್ಕೆ' ತಿಳಿಸಿದ್ದಾರೆ.