ಇಂದು ಚಳಿಗಾಲ ಅದಿವೇಶನದ ಕಡೆಯ ದಿನ. ನೋಟ್ ಬ್ಯಾನ್ ಗದ್ದಲಕ್ಕೆ ಇಡೀ ಅಧಿವೇಶನವೇ ಬಲಿಯಾಗಿದೆ. ನಿನ್ನೆಯೂ ನೋಟ್'ಬ್ಯಾನ್ ವಿಚಾರವಾಗಿ ಮೋದಿ ಉತ್ತರಕ್ಕಾಗಿ ವಿಪಕ್ಷಗಳು ಪಟ್ಟು ಹಿಡಿದರೆ, ಅಗಸ್ಟಾ ಹಗರಣದ ವಿಚಾರವಾಗಿ ಕಾಂಗ್ರೆಸ್ವಿರುದ್ಧ ಬಿಜೆಪಿ ಮುಗಿ ಬಿತ್ತು. ಅಲ್ಲಿಗೆ ನಿನ್ನೆಯೂ ಸುಗಮ ಕಲಾಪ ನಡೆಯಲೇ ಇಲ್ಲ. ಕೊನೆಯ ದಿನವಾದ ಇಂದು ಮೋದಿ ವಿಪಕ್ಷಗಳಿಗೆ ಉತ್ತರ ನೀಡುತ್ತಾರಾ ಎನ್ನುವ ಕುತೂಹಲವಿದೆ.
ನವದೆಹಲಿ(ಡಿ.16): ಇಂದು ಚಳಿಗಾಲ ಅದಿವೇಶನದ ಕಡೆಯ ದಿನ. ನೋಟ್ ಬ್ಯಾನ್ ಗದ್ದಲಕ್ಕೆ ಇಡೀ ಅಧಿವೇಶನವೇ ಬಲಿಯಾಗಿದೆ. ನಿನ್ನೆಯೂ ನೋಟ್'ಬ್ಯಾನ್ ವಿಚಾರವಾಗಿ ಮೋದಿ ಉತ್ತರಕ್ಕಾಗಿ ವಿಪಕ್ಷಗಳು ಪಟ್ಟು ಹಿಡಿದರೆ, ಅಗಸ್ಟಾ ಹಗರಣದ ವಿಚಾರವಾಗಿ ಕಾಂಗ್ರೆಸ್ವಿರುದ್ಧ ಬಿಜೆಪಿ ಮುಗಿ ಬಿತ್ತು. ಅಲ್ಲಿಗೆ ನಿನ್ನೆಯೂ ಸುಗಮ ಕಲಾಪ ನಡೆಯಲೇ ಇಲ್ಲ. ಕೊನೆಯ ದಿನವಾದ ಇಂದು ಮೋದಿ ವಿಪಕ್ಷಗಳಿಗೆ ಉತ್ತರ ನೀಡುತ್ತಾರಾ ಎನ್ನುವ ಕುತೂಹಲವಿದೆ.
ಬರೀ ಗದ್ದಲ-ಕೋಲಾಹಲಕ್ಕೆ ಕಲಾಪ ಬಲಿ ಆಗ್ತಿರೋದಿಕೆ ಬಿಜೆಪಿ ಬೀಷ್ಮ ಗರಂ ಆಗಿದ್ದಾರೆ. ಈ ಪರಿಸ್ಥಿತಿ ನೋಡಿದರೆ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಂತ ಮನಸ್ಸಾಗುತ್ತಿದೆ ಎಂದಿದ್ದಾರೆ. ಅಡ್ವಾಣಿಗೆ ಬೇಸರವಾಗಿದ್ದನ್ನು ತೃಣಮೂಲ ಕಾಂಗ್ರೆಸ್ ಸಂಸದ ಇದ್ರಿಸ್ ಅಲಿ ಸ್ಪಷ್ಪಡಿಸಿದರು .
ಅಡ್ವಾಣಿ ಅಭಿನಂದಿಸಿದ ರಾಹುಲ್ ಗಾಂಧಿ
ಅಡ್ವಾಣಿ ಅಸಮಾಧಾನದ ಬಗ್ಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು, ನಿಮ್ಮ ಪಕ್ಷದೊಳಗೆ ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತಿದ್ದೀರಿ, ಥ್ಯಾಂಕ್ಯೂ ಅಡ್ವಾಣಿಜಿ ಎಂದು ಟ್ವೀಟ್ ಮಾಡಿದ್ದಾರೆ.
ವಿಪಕ್ಷಗಳಿಂದ ರಾಷ್ಟ್ರಪತಿಗಳ ಭೇಟಿ ಸಾಧ್ಯತೆ: ಕೇಂದ್ರದ ವಿರುದ್ಧ ದೂರು ನೀಡಲು ಚಿಂತನೆ
ಈ ನಡುವೆ ವಿರೋಧ ಪಕ್ಷಗಳ ನಾಯಕರೆಲ್ಲ ಸೇರಿ ಇಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರನ್ನು ಭೇಟಿಯಾಗಿ ಸಂಸತ್ತಿನಲ್ಲಿ ಚರ್ಚೆ ನಡೆಸಲು ಆಡಳಿತಾರೂಢ ಸರ್ಕಾರ ಅವಕಾಶ ಮಾಡಿಕೊಡುತ್ತಿಲ್ಲ ಎಂದು ದೂರು ನೀಡಲು ತೀರ್ಮಾನಿಸಿವೆ.
ಒಟ್ಟಿನಲ್ಲಿ ನೋಟ್ ಬ್ಯಾನ್ ವಿಚಾರವಾಗಿ ಇಡೀ ಚಳಿಗಾಲದ ಅಧಿವೇಶನ ಬಲಿಯಾಗಿದ್ದು ಅಂತಿಮವಾಗಿ ವಿಪಕ್ಷಗಳ ಬಾಯಿ ಮುಚ್ಚಿಸಲು ಕೊನೆ ದಿನವಾದ ಇಂದಾದರೂ ಪ್ರಧಾನಿ ಮಾತನಾಡುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.
