ರಿವಾಲ್ವರ್ ಮಕ್ಕಳ ಕೈಗಿತ್ತು ಬ್ಯಾಟ್ ಹಿಡಿದ ಪೊಲೀಸ್!

On duty policeman hands over gun to play cricket
Highlights

ರಿವಾಲ್ವರ್ ಮಕ್ಕಳ ಕೈಗಿತ್ತು ಬ್ಯಾಟ್ ಹಿಡಿದ ಪೊಲೀಸ್

ಬಿಹಾರ ಬಿಜೆಪಿ ಸಂಸದರ ಭದ್ರತಾ ಅಧಿಕಾರಿ

ಕ್ರಿಕೆಟ್ ಆಡಲು ರಿವಾಲ್ವರ್ ಮಕ್ಕಳ ಕೈಗಿತ್ತ ಗಾರ್ಡ್
 

ಗಯಾ(ಜು.1): ಬಿಜೆಪಿ ಸಂಸದರೊಬ್ಬರ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಗಾರ್ಡ್ ವೋರ್ವ,​ ತನ್ನ ರಿವಾಲ್ವರ್ ಅನ್ನು ಮಕ್ಕಳ ಕೈಗೆ ಕೊಟ್ಟು ಕ್ರಿಕೆಟ್​ ಆಡಿದ್ದಾರೆ. ಬಿಹಾರದ ಗಯಾದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ರಿವಾಲ್ವರ್ ಕೈಗೆ ಸಿಕ್ಕ ಮಕ್ಕಳು ಒಬ್ಬರಿಗೊಬ್ಬರು ಗುರಿ ಇಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. 

ಬಿಹಾರದ ಔರಂಗಾಬಾದ್​​ ಕ್ಷೇತ್ರದ ಬಿಜೆಪಿ ಸಂಸದ ಸುಶೀಲ್​ ಸಿಂಗ್​ ಭದ್ರತೆಗೆ ನಿಯೋಜನೆಗೊಂಡಿದ್ದ ಗಾರ್ಡ್ ಇಂತಹ ಬೇಜವಾಬ್ದಾರಿ ವರ್ತನೆ  ತೋರಿದ್ದಾರೆ. ಇಲ್ಲಿನ ತಿಕಾರಿ ರಾಜ್​ ಇಂಟರ್​ನ್ಯಾಷನಲ್​ ಶಾಲೆಯಲ್ಲಿ ಕಾರ್ಯಕ್ರಮದಲ್ಲಿ ಸಂಸದ ಸುಶೀಲ್​ ಸಿಂಗ್​, ಬಿಜೆಪಿ ರಾಜಾಧ್ಯಕ್ಷ ನಿತ್ಯಾನಂದ ರೈ ಬಂದಿದ್ದರು. ಈ ವೇಳೆ ಇಲ್ಲಿದ್ದ ಮಕ್ಕಳ ಜೊತೆ ಸಂಸದರ ಭದ್ರತಾ ಪೊಲೀಸ್​ ಕ್ರಿಕೆಟ್​ ಆಡಿದ್ದಾರೆ.  

ತಮ್ಮ ಸರ್ವೀಸ್​ ರಿವಾಲ್ವರ್ ​​ಅನ್ನು ಮಕ್ಕಳ ಕೈ ಗೆ ಕೊಟ್ಟು ಪೊಲೀಸ್​ ಗಾರ್ಡ್ ಬ್ಯಾಟ್​ ಹಿಡಿದಿದ್ದಾರೆ. ಇತ್ತ, ಮಕ್ಕಳು ತಮ್ಮ ಕೈಗೆ ಸಿಕ್ಕ ರಿವಾಲ್ವರ್​ ಅನ್ನು ಒಬ್ಬರಿಗೊಬ್ಬರು ಗುರಿ ಇಟ್ಟುಕೊಂಡಿದ್ದಾರೆ. ಅದೃಷ್ಟವಶಾತ್​ ಈ ವೇಳೆ ಯಾವುದೇ ಅನಾಹುತ ನಡೆದಿಲ್ಲ.

loader