ಮುಂಬೈ(ಅ.05): ಟಿವಿ ಕಾರ್ಯಕ್ರಮವೊಂದರಲ್ಲಿ ಸೈನಿಕರಿಗೆ ಅವಮಾನ ಮಾಡಿದ ಆರೋಪದ ಮೇಲೆ ಖ್ಯಾತ ಬಾಲಿವುಡ್​ ನಟ ಓಂಪುರಿ ವಿರುದ್ಧ ಮುಂಬೈನ ಅಂಧೇರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಾರತೀಯ ಸಿನಿಮಾ ನಿಮಾರ್ಪಕರ ಸಂಘ ಪಾಕ್ ಕಲಾವಿದರನ್ನು ನಿಷೇಧಿಸುವ ಕುರಿತು ಚರ್ಚೆಯಲ್ಲಿ ಉರಿ ಉಗ್ರ ದಾಳಿಯ ಕುರಿತಂತೆ ಓಂಪುರಿ ಮಾತನಾಡಿ, ಸೇನೆಗೆ ಸೈನಿಕರು ಸೇರಬೇಕೆಂದು ಹೇಳಿದ್ದು ಯಾರು? ಅವರಿಗೆ ಯಾರು ಶಸ್ತ್ರ ಎತ್ತಿಕೊಳ್ಳಲು ಹೇಳಿದ್ದರು? ಎಂದು ಓಂಪುರಿ ಪ್ರಶ್ನಿಸಿದ್ದರು. ಅಲ್ಲದೆ ಬೇಕಿದ್ದರೆ ಕೆಲ ಜನರನ್ನು ಪಾಕಿಸ್ತಾನಕ್ಕೆ ಆತ್ಮಾಹತ್ಯಾ ಬಾಂಬರ್​ಗಳನ್ನಾಗಿ ಮಾಡಿ ಕಳಿಸಿ . ಇದು ಬಿಟ್ಟು ಯುದ್ಧ ಮಾಡಿ ನಮ್ಮ ದೇಶವನ್ನು ಇಸ್ರೇಲ್ ಪ್ಯಾಲೆಸ್ತೀನ್ ಏಕೆ ಮಾಡುತ್ತೀರಿ ಎಂದಿದ್ದರು.

ಇದಕ್ಕೆ ನಟ ಅನುಪಮ್ ಖೆರ್​ ಆದಿಯಾಗಿ ಅನೇಕರು ಆಕ್ಷೇಪಿಸಿದ್ದರು. ಇನ್ನು ಇದು ವಿವಾದವಾಗುತ್ತಲೇ ಹೇಳಿಕೆ ನೀಡಿದ ಓಂಪುರಿ ನಾನು ಈ ಬಗ್ಗೆ ವಿಷಾದಿಸುತ್ತೇನೆ. ಮೊದಲು ನಾನು ಉರಿ ದಾಳಿಯಲ್ಲಿ ಮಡಿದ ಹುತಾತ್ಮರ ಕುಟುಂದ ಬಳಿ ಕ್ಷಮ ಕೇಳುತ್ತೇನೆ. ಅವರು ಕ್ಷಮೆ ನೀಡಿದ ಬಳಿಕ ಆಣನು ದೇಶ, ಸೇನೆಯ ಕ್ಷಮೆ ಕೋರುವೆ ಎಂದಿದ್ದಾರೆ. ಈ ಹೇಳಿಕೆಗೆ ನಾನು ಶಿಕ್ಷೆಗೂ ಯೋಗ್ಯನಿದ್ದೇನೆ ಎಂದಿದ್ದಾರೆ.