ಈಗಾಗಲೇ ರೈಲು ಟಿಕೆಟ್, ವಿಮಾನ ಟಿಕೆಟ್, ಪೆಟ್ರೋಲ್ ಬಂಕ್, ಟೋಲ್'ಗಳಲ್ಲಿ ನೀಡಿದ್ದ ರಿಯಾಯಿತಿಯನ್ನು ಸರ್ಕಾರವು ಹಿಂಪಡೆದುಕೊಂಡಿತ್ತು.
ನವದೆಹಲಿ(ಡಿ.14): ಗೃಹೋಪಯೋಗಿ ಬಿಲ್ ಪಾವತಿಸಲು ಹಾಗೂ ಔಷಧಿಗಳನ್ನು ಖರೀದಿಸಲು ಹಳೆಯ 500 ರೂಪಾಯಿ ನೋಟುಗಳನ್ನು ಬಳಸಬಹುದು ಎಂದು ಸರ್ಕಾರ ನೀಡಿದ್ದ ವಿನಾಯಿತಿಯನ್ನು ಡಿಸೆಂಬರ್ 15ರ ಮಧ್ಯರಾತ್ರಿಯ ನಂತರ ಚಲಾವಣೆ ನಿಲ್ಲಿಸಲು ಸರ್ಕಾರ ತೀರ್ಮಾನಿಸಿದೆ.
ಅದೇರೀತಿ ಹಳೆ ನೋಟಿನಲ್ಲಿನ ಮೊಬೈಲ್ ರೀಚಾರ್ಜ್ ಪಾವತಿ ಸೌಲಭ್ಯವೂ ಸ್ಥಗಿತಗೊಳ್ಳಲಿದೆ. ಇನ್ಮುಂದೆ ಜನರು ಹಳೆಯ 500 ರೂ ನೋಟುಗಳನ್ನು ಬ್ಯಾಂಕ್ ಖಾತೆಯಲ್ಲಿಯೇ ಜಮೆ ಮಾಡಬೇಕಿದೆ.
'ಈ ಕುರಿತಂತೆ ಹಳೆಯ 500 ರೂಪಾಯಿ ನೋಟುಗಳನ್ನು ಬಳಸಲು ನೀಡಿದ್ದ ಕೆಲವು ವಿನಾಯಿತಿಗಳನ್ನು ಡಿಸೆಂಬರ್ 15ರ ಮಧ್ಯರಾತ್ರಿಯ ನಂತರ ಕೊನೆಗೊಳ್ಳಲಿದೆ' ಎಂದು ಹಣಕಾಸು ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಟ್ವೀಟ್ ಮಾಡಿದ್ದಾರೆ.
ಈಗಾಗಲೇ ರೈಲು ಟಿಕೆಟ್, ವಿಮಾನ ಟಿಕೆಟ್, ಪೆಟ್ರೋಲ್ ಬಂಕ್, ಟೋಲ್'ಗಳಲ್ಲಿ ನೀಡಿದ್ದ ರಿಯಾಯಿತಿಯನ್ನು ಸರ್ಕಾರವು ಹಿಂಪಡೆದುಕೊಂಡಿತ್ತು.
ಕೇಂದ್ರ ಸರ್ಕಾರವು ಸೆಪ್ಟೆಂಬರ್ 08ರಂದು ರೂ.500 ಮತ್ತು 1000 ನೋಟುಗಳನ್ನು ಅಮಾನ್ಯಗೊಳಿಸಿದ ನಂತರ ಮೊದಲ 72 ಗಂಟೆಗಳವರೆಗೆ ಮೂಲಭೂತ ಅಗತ್ಯೆ ಹಾಗೂ ಗೃಹೋಪಯೋಗಿ ಬಿಲ್ ಪಾವತಿಸಲು ಸರ್ಕಾರ ವಿನಾಯಿತಿ ನೀಡಿತ್ತು. ನಂತರ ಈ ವಿನಾಯಿತಿಯನ್ನು ಅಂತಿಮವಾಗಿ ಡಿಸೆಂಬರ್ 15ರವರೆಗೂ ವಿಸ್ತರಿಸಿತ್ತು.
