ವಾಹನ ಸವಾರರಿಗೆ ಗುಡ್ ನ್ಯೂಸ್

Oil companies plan to add 25000 petrol pumps
Highlights

ಪೆಟ್ರೋಲ್ ಪಂಪ್ ಡೀಲರ್‌ಶಿಪ್ ನೀತಿಯಲ್ಲಿ ಕೇಂದ್ರ ಸರ್ಕಾರ ಆಮೂಲಾಗ್ರ ಬದಲಾವಣೆ ತರಲು ಮುಂದಾಗಿದೆ. ಇನ್ನು ಮುಂದೆ ಸರ್ಕಾರವು ಪೆಟ್ರೋಲ್ ಬಂಕ್ ಡೀಲರ್‌ಶಿಪ್‌ಗಳನ್ನು ಕೊಡದೇ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೇ ಈ ಹೊಣೆ ವಹಿಸಲಿದೆ. ಈ ಸಂಬಂಧ ಪೆಟ್ರೋಲಿಯಂ ಸಚಿವಾಲಯವು ಹೊಸ ನಿಯಮಾವಳಿಗಳನ್ನು ರಚಿಸಿಕೊಳ್ಳುವಂತೆ ತೈಲ ಕಂಪನಿಗಳಿಗೆ ಸೂಚಿಸಿದೆ. 

ನವದೆಹಲಿ: ಪೆಟ್ರೋಲ್ ಪಂಪ್ ಡೀಲರ್‌ಶಿಪ್ ನೀತಿಯಲ್ಲಿ ಕೇಂದ್ರ ಸರ್ಕಾರ ಆಮೂಲಾಗ್ರ ಬದಲಾವಣೆ ತರಲು ಮುಂದಾಗಿದೆ. ಇನ್ನು ಮುಂದೆ ಸರ್ಕಾರವು ಪೆಟ್ರೋಲ್ ಬಂಕ್ ಡೀಲರ್‌ಶಿಪ್‌ಗಳನ್ನು ಕೊಡದೇ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೇ ಈ ಹೊಣೆ ವಹಿಸಲಿದೆ. ಈ ಸಂಬಂಧ ಪೆಟ್ರೋಲಿಯಂ ಸಚಿವಾಲಯವು ಹೊಸ ನಿಯಮಾವಳಿಗಳನ್ನು ರಚಿಸಿಕೊಳ್ಳುವಂತೆ ತೈಲ ಕಂಪನಿಗಳಿಗೆ ಸೂಚಿಸಿದೆ. 

ಈ ನಿಯಮಾವಳಿಗಳು ರಚನೆ ಯಾದ ಕೂಡಲೇ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಒಂದೇ ಬಾರಿಗೆ 25 ಸಾವಿರ ಹೊಸ ಪೆಟ್ರೋಲ್ ಬಂಕ್ ಗಳನ್ನು ಸ್ಥಾಪಿಸಲು ಮುಂದಾಗಿವೆ ಎಂದು ಕೂಡ ತಿಳಿದುಬಂದಿದೆ. ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ತಾನು ವಿನಿಯಂತ್ರಣಗೊಳಿಸಿದ್ದು, ಇನ್ನು ಡೀಲರ್‌ಶೀಪ್ ಕೊಡುವ ಅಧಿಕಾರವನ್ನು ತಾನೇ ಇಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ. 

ಹೀಗಾಗಿ ಡೀಲರ್‌ಶಿಪ್ ಅಧಿಕಾರವನ್ನೂ ಕಂಪನಿಗಳಿಗೇ ವಹಿಸಲು ತೈಲ ಸಚಿವಾಲಯ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ಈ ನಡುವೆ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್, ಹಿಂದುಸ್ತಾನ್ ಪೆಟ್ರೋಲಿಯಂ ಹಾಗೂ ಭಾರತ್ ಪೆಟ್ರೋಲಿಯಂ ಕಂಪನಿಗಳು ನಿಯಮಾವಳಿ ಗಳನ್ನು ಬಹುತೇಕ ಸಿದ್ಧಪಡಿಸಿವೆ. ಇದಕ್ಕೆ ಸರ್ಕಾರದ ಅನುಮೋದನೆ ದೊರಕಿದ ಕೂಡಲೇ 25 ಸಾವಿರ ಪೆಟ್ರೋಲ್ ಬಂಕ್ ಡೀಲರ್‌ಶಿಪ್ ಗಳಿಗೆ ಮಾಧ್ಯಮಗಳಲ್ಲಿ ಜಾಹೀರಾತು ನೀಡುವ ಮೂಲಕ ಅರ್ಜಿ ಆಹ್ವಾನಿಸಲಿದೆ ಎಂದು ಮೂಲಗಳು ಹೇಳಿವೆ.

ಈ ಬಂಕ್‌ಗಳು ಹೆಚ್ಚಾಗಿ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಸ್ಥಾಪನೆಯಾಗುವ ಸಾಧ್ಯತೆ ಇದೆ. ಈಗಾಗಲೇ ಸರ್ಕಾರಿ ಸ್ವಾಮ್ಯದ ೫೭ ಸಾವಿರ ಪೆಟ್ರೋಲ್ ಬಂಕ್‌ಗಳು ದೇಶದಲ್ಲಿವೆ. ಇನ್ನು ಖಾಸಗಿ ಕಂಪನಿಗಳು ಸಾವಿರ ಬಂಕ್‌ಗಳನ್ನು ಹೊಂದಿವೆ.

loader