ಬೆಂಗಳೂರು(ಸೆ.10): ಕನ್ನಡದ ತಿಥಿ ಚಿತ್ರದ ಮೂಲಕ ಮನೆ ಮಾತಾಗಿರುವ ಗಡ್ಡಪ್ಪ ಮತ್ತೆ ಫೇಮಸ್ ಆಗಿದ್ದಾರೆ. ಕಾವೇರಿ ಹೋರಾಟದಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದ ಗಡ್ಡಪ್ಪ ಈಗ ಕನ್ನಡ ರಾಪ್ ಸಾಂಗ್ವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಗಡ್ಡಪ್ಪ ರಾಪ್ ಸಾಂಗ್ ನಲ್ಲಿ ಪುಲ್ ಫೇಮಸ್ ಆಗಿದ್ದಾರೆ. KA-01 ಹೆಸರಿನ ರಾಪ್ ಆಲ್ಬಂ ನಲ್ಲಿ ಗಡ್ಡಪ್ಪ ಕಾಣಿಸಿಕೊಂಡಿದ್ದು ವಿಶೇಷವಾಗಿದೆ. ಇಲ್ಲೂ ಗಡ್ಡಪ್ಪ ತಮ್ಮದೇ ಸ್ಟೈಲ್ ನಲ್ಲಿ ಡೈಲಾಗ್ ಹಾಕಿದ್ದು, ಕನ್ನಡ ಅಭಿಮಾನಿಯಾಗಿ ಕನ್ನಡ ಭಾಷೆ ಉಳಿಸಲು ಮುಂದಾಗಿದ್ದಾರೆ.
ಹೊಸ ಲುಕ್ ನಲ್ಲಿ ಕಾಣಿಸಿಕೊಮಡ ತಿಥಿ ಖ್ಯಾತಿಯ ಗಡ್ಡಪ್ಪ, ಆಲ್ಬಂ ಸಾಂಗ್ ನಲ್ಲಿ ಸಖತ್ ಮಿಂಚುತ್ತಿದ್ದು, ಕನ್ನಡಿಗರ ಮನಗೆದ್ದಾರೆ.

