ಹುಮನಾಬಾದ್ ಕೈಗಾರಿಕಾ ಪ್ರದೇಶದಲ್ಲಿ ಕೆಮಿಕಲ್ ಪ್ಲಾಂಟ್, ಪ್ಲಾಸ್ಟಿಕ್ ಯೂನಿಟ್ಸ್ ಹಾಗೂ ಇತರ ಎಲ್ಲಾ ಯೂನಿಟ್ ಪರೀಕ್ಷಣೆ ಮಾಡಿ ವರದಿ ನೀಡಲು ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ ಅವರು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೊಳಗೊಂಡು ತಂಡಗಳನ್ನು ರಚಿಸಿ ಆದೇಶ ಹೊರಡಿಸಿದ್ದರು ಈ ಹಿನ್ನೆಲೆಯಲ್ಲಿ ಬುಧವಾರ 60 ಜನ ಅಧಿಕಾರಿಗಳು ಹಾಗೂ 40 ಜನ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
ಬೀದರ್(ನ.23): ಹುಮನಾಬಾದ್ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕಾ ತ್ಯಾಜ್ಯದಿಂದ ನೀರು ಹಾಗೂ ವಾತಾವರಣ ಕಲುಷಿತಗೊಳ್ಳುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ವಿವಿಧ ಕಾರ್ಖಾನೆಗಳಿಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಹುಮನಾಬಾದ್ ಕೈಗಾರಿಕಾ ಪ್ರದೇಶದಲ್ಲಿ ಕೆಮಿಕಲ್ ಪ್ಲಾಂಟ್, ಪ್ಲಾಸ್ಟಿಕ್ ಯೂನಿಟ್ಸ್ ಹಾಗೂ ಇತರ ಎಲ್ಲಾ ಯೂನಿಟ್ ಪರೀಕ್ಷಣೆ ಮಾಡಿ ವರದಿ ನೀಡಲು ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ ಅವರು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೊಳಗೊಂಡು ತಂಡಗಳನ್ನು ರಚಿಸಿ ಆದೇಶ ಹೊರಡಿಸಿದ್ದರು ಈ ಹಿನ್ನೆಲೆಯಲ್ಲಿ ಬುಧವಾರ 60 ಜನ ಅಧಿಕಾರಿಗಳು ಹಾಗೂ 40 ಜನ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. 17 ತಂಡಗಳ ಪೈಕಿ 9 ತಂಡಗಳು ವಿವಿಧ ರಾಸಾಯನಿಕ ಕೈಗಾರಿಕಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸಿದವು. ಇನ್ನುಳಿದ ತಂಡಗಳು ಬೇರೆ ಬೇರೆ ಘಟಕಗಳಿಗೆ ಭೇಟಿ ನೀಡಿದವು. ಹುಮನಾಬಾದ ಡಿಎಸ್‌ಪಿ, ಸಿಪಿಐ ಹಾಗೂ ಬಸವಕಲ್ಯಾಣದ ಸಿಪಿಐ ಮತ್ತು ಪೊಲೀಸ್ ಸಬ್‌ಇನ್'ಸ್ಪೆಕ್ಟರ್ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಭದ್ರತೆಯ ನೇತೃತ್ವ ವಹಿಸಿದ್ದರು.
ಬೀದರ್ ಸಹಾಯಕ ಆಯುಕ್ತ ಶಿವಕುಮಾರ ಶೀಲವಂತ್ ನೇತೃತ್ವದಲ್ಲಿ ಚಿಟಗುಪ್ಪ ವಿಶೇಷ ತಹಸೀಲ್ದಾರ್ ಜಿಯಾವುದ್ದಿನ್, ಕರ್ನಾಟಕ ಫಾರ್ಮಸಿ ಕಾಲೇಜು ಉಪನ್ಯಾಸಕ ಡಾ.ಕಾಶಿನಾಥ ನೌಬಾದೆ, ಬಸವಕಲ್ಯಾಣ ಕೃಷಿ ಇಲಾಖೆ ಸಹಾಯಕ ನಿರ್ದೇಶಕರನ್ನು ಒಳಗೊಂಡ ತಂಡವು ಸತ್ಯ ದೀಪ್ತ ಫಾರ್ಮಸುಟಿಕಲ್ಸ್ ಲಿಮಿಟೆಡ್ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಬಸವಕಲ್ಯಾಣ ಸಹಾಯಕ ಆಯುಕ್ತ ಶರಣಬಸಪ್ಪ ಕೋಟೇಪ್ಪಗೋಳ ನೇತೃತ್ವದಲ್ಲಿ ಕರ್ನಾಟಕ ಫಾರ್ಮಸಿ ಕಾಲೇಜು ಉಪನ್ಯಾಸಕ ಡಾ.ವಿಜಯ ಕುಮಾರ ತಿರಲಾಪುರೆ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರನ್ನೊಳಗೊಂಡ ತಂಡವು ಆರ್-ಕೆಮ್(ಸೋಮನಹಾಳ್) ಪ್ರೈವೇಟ್ ಲಿಮಿಟೆಡ್ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ ನೇತೃತ್ವದಲ್ಲಿ ಕರ್ನಾಟಕ ಫಾರ್ಮಸಿ ಕಾಲೇಜು ಉಪನ್ಯಾಸಕರಾದ ಡಾ.ಶಿವಕುಮಾರ ಚಂದಾ, ಹುಮನಾಬಾದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ ಮನೋಜ ಲಾಡೆ ಅವರನ್ನು ಒಳಗೊಂಡ ತಂಡದ ಅಧಿಕಾರಿಗಳು ಲಕ್ಷ್ಮೀ ದುರ್ಗಾ ಡ್ರಗ್ಸ್ ಆ್ಯಂಡ್ ಇಂಟರ್ ಮೇಡಿಯೇಟ್ಸ್ ಪ್ರೈವೇಟ್ ಲಿಮಿಟೆಡ್ ಘಟಕಕ್ಕೆ ಭೇಟಿ ನೀಡಿದರು.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕಿಶೋರ ಜೋಶಿ ನೇತೃತ್ವದಲ್ಲಿ ಬಸವ ಕಲ್ಯಾಣ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಲಿಂಗರಾಜ ಅರಸ್, ಕರ್ನಾಟಕ ಫಾರ್ಮಸಿ ಕಾಲೇಜು ಉಪನ್ಯಾಸಕರಾದ ಡಾ.ಬಸವರಾಜ ರಾಗಾ, ಭಾಲ್ಕಿ ಸಮುದಾಯ ಸಂಘಟನಾಧಿಕಾರಿ ಸ್ವಾಮಿದಾಸ ಅವರನ್ನೊಳಗೊಂಡ ತಂಡವು ಜಿಪಿಆರ್ ಲೈಫ್ ಸೈನ್ಸ್ ಪ್ರೈವೇಟ್ ಲಿಮಿಟೆಡ್ ಘಟಕಕ್ಕೆ ಭೇಟಿ ನೀಡಿತು.
ಡಿಡಿಎಲ್‌ಆರ್'ಆರ್.ರವಿಕುಮಾರ ನೇತೃತ್ವದಲ್ಲಿ ಭಾಲ್ಕಿ ತಹಸೀಲ್ದಾರ್ ಕಚೇರಿಯ ಶಿರಸ್ತೇದಾರ ಗೋಪಾಲ ಹಿಪ್ಪರಗಿ, ಹುಮನಾಬಾದ ಪುರಸಭೆ ಮುಖ್ಯಾಧಿಕಾರಿ ಸುರೇಶ ಬಬಲಾದ ಅವರು ಸಾತಿ ಡ್ರಗ್ಸ್ ಆ್ಯಂಡ್ ಇಂಟರ್'ಮಿಡಿಯೇಟ್ಸ್ ಘಟಕಕ್ಕ ಭೇಟಿ ನೀಡಿದರು. ಕುಟುಂಬ ಕಲ್ಯಾಣ ಅಧಿಕಾರಿ ಡಾ. ಇಂದುಮತಿ ಪಾಟೀಲ್ ನೇತೃತ್ವದಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಎಸ್.ರಮೇಶ, ಹುಮನಾಬಾದ ತಹಸೀಲ್ದಾರ ಕಚೇರಿಯ ಶಿರಸ್ತೇದಾರ ಪಲ್ಲವಿ, ಹುಮನಾಬಾದ ಪುರಸಭೆ ಕಂದಾಯ ವಿಭಾಗದ ಕಚೇರಿ ವ್ಯವಸ್ಥಾಪಕ ದಿಲ್ದಾರ್'ಸಿಂಗ್ ಅವರ ತಂಡದವರು ಕ್ಷತ್ರೀಯ ಲ್ಯಾಬೋರೇಟರೀಸ್ ಪ್ರೈವೇಟ್ ಲಿಮಿಟೆಡ್ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಬಾವಗೆ ಅವರ ನೇತೃತ್ವದಲ್ಲಿ ಬಸವಕಲ್ಯಾಣ ಗ್ರೇಡ್-2 ತಹಸೀಲ್ದಾರ ಸಂಗಯ್ಯಾ ಸ್ವಾಮಿ, ಭಾಲ್ಕಿ ಪುರಸಭೆ ಪರಿಸರ ಅಭಿಯಂತರರಾದ ರವೀಂದ್ರ ಅಂಗಡಿ, ಚಿಟಗುಪ್ಪ ಪುರಸಭೆಯ ಸಮುದಾಯ ಸಂಘಟನಾಧಿಕಾರಿ ಅಶೋಕ ಚನಕೋಟೆ ತಂಡದ ಅಧಿಕಾರಿಗಳು ನೆಕ್ಟರ್ ಕ್ರಾಪ್ ಸೈನ್ಸೆಸ್ ಘಟಕಕ್ಕೆ ಭೇಟಿ ನೀಡಿದರು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶರಣಯ್ಯಾ ಎಸ್.ಮಠಪತಿ ನೇತೃತ್ವದಲ್ಲಿ ರವೀಂದ್ರ ಕಾಂಬಳೆ, ಮಹಮ್ಮದ್ ಕರೀಮ್, ಚಾಂದ್'ಪಟೇಲ್ ಅವರನ್ನೊಳಗೊಂಡ ತಂಡವು ವೆಂಕಟಾಶ್ರೀ ಆರ್ಗಾನಿಕ್ಸ್ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಡಾ.ರಾಜೇಶ್ವರಿ ಚಂದಾ ನೇತೃತ್ವದಲ್ಲಿ ಶಿವಾನಂದ ಮೇತ್ರೆ, ಗ್ವಾಲೇಶ, ಶಂಭುಲಿಂಗ ದೇಸಾಯಿ ಅವರನ್ನು ಒಳಗೊಂಡ ತಂಡವು ಶ್ಯೂಟಿಕ್ ಲ್ಯಾಬ್ಸ್ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿತು.
