ಕೊಪ್ಪಳ(ಸೆ.09): ರಾಜ್ಯದ ಮುಖ್ಯಂತ್ರಿಗಳೇ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ ಆದರೆ ಕೊಪ್ಪಳ ಪ್ರಭಾರ ಜಿಲ್ಲಾಧಿಕಾರಿ ಮಾತ್ರ ರಜೆ ಕೊಡಬಾರದು ಎಂದು ಆದೇಶಿಸಿದ್ದಾರೆ. ಮುಖ್ಯಮಂತ್ರಿಯ ಆದೇಶವನ್ನೇ ಕಡೆಗಣಿಸಿರುವ ಜಿಲ್ಲಾ ಪಂಚಾಯತ್ ಸಿಇಒ ರಾಮಚಂದ್ರನ್ ಪ್ರತಿಭಟನೆಯಲ್ಲಿ ಭಾಗಿಯಾದರೆ ಆಯಾ ಶಾಲೆಗಳ ಮುಖ್ಯಸ್ಥರೇ ಹೊಣೆ ಎಂದು ನಿನ್ನೆ ಫರ್ಮಾನು ಹೊರಡಿಸಿದ್ದಾರೆ.
ಸಿಇಒ ರಾಮಚಂದ್ರನ್ ಮೂಲತಃ ತಮಿಳುನಾಡಿನವರಾಗಿದ್ದಾರೆ. ಇತ್ತ ಕರ್ನಾಟಕ ಹೊತ್ತಿ ಉರಿಯುತ್ತಿದ್ದರೂ ಈ ಪ್ರಭಾರ ಜಿಲ್ಲಾಧಿಕಾರಿ ಮಾತ್ರ ಕನ್ನಡ ವಿರೋಧಿ ಧೋರಣೆಯನ್ನು ಅನುಸರಿಸಿದ್ದಾರೆ. ಇವರ ಈ ಆದೇಶದಿಂದ ತಮಿಳು ಪ್ರೇಮ ಸ್ಪಷ್ಟವಾಗಿ ಕಂಡು ಬಂದಿದೆ.
ಅವರ ಈ ನಡೆಗೆ ಕೊಪ್ಪಳದಾದ್ಯಂತ ಸಾಕಷ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ನಡೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
