ಇನ್ಮುಂದೆ ಸೋಶಿಯಲ್ ಮೀಡಿಯಾದಲ್ಲೂ ಪರಿಶಿಷ್ಟ ಜಾತಿ/ಪಂಗಡಗಳಿಗೆ ಸೇರಿದ ವ್ಯಕ್ತಿಗಳನ್ನು ನಿಂದಿಸಿದ್ದಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ.

ನವದೆಹಲಿ: ಇನ್ಮುಂದೆ ಸೋಶಿಯಲ್ ಮೀಡಿಯಾದಲ್ಲೂ ಪರಿಶಿಷ್ಟ ಜಾತಿ/ಪಂಗಡಗಳಿಗೆ ಸೇರಿದ ವ್ಯಕ್ತಿಗಳನ್ನು ನಿಂದಿಸಿದ್ದಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೋಶಿಯಲ್ ಮೀಡಿಯಾ ಪೋಸ್ಟ್’ಗಳಲ್ಲಿ ನಿಂದನಾತ್ಮಕ ಪೋಸ್ಟ್ ಮಾಡಿದಲ್ಲಿ ಅದನ್ನು ಕೂಡಾ ಜಾತಿ ನಿಂದನೆ ಕಾಯ್ದೆಯಡಿಯಲ್ಲಿ ಪರಿಗಣಿಸಲಾಗುವುದು ಎಂದು ದೆಹಲಿ ಹೈಕೋರ್ಟ್ ಹೇಳಿದೆ.

ಪರಿಶಿಷ್ಟ ಜಾತಿ/ಪಂಗಡ (ದೌರ್ಜನ್ಯ ತಡೆ) ಕಾಯ್ದೆ-1989ಯನುಸಾರ ಜಾತಿನಿಂದನೆಯು ಗಂಭೀರ ಅಪರಾಧವಾಗಿದೆ. ಆರೋಪ ಸಾಬೀತಾದಲ್ಲಿ ಕೃತ್ಯವೆಸಗಿದವನಿಗೆ ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಲಾಗುತ್ತದೆ.

ಸಂತ್ರಸ್ತರು ಮುಂದೆ ಇರಲಿ ಅಥವಾ ಇಲ್ಲದಿರಲಿ, ನಿಂದಿಸುವ ಉದ್ದೇಶವಿದ್ದಲ್ಲಿ ಅದು ಅಪರಾಧವಾಗಿ ಪರಿಗಣಿಸಲಾಗುವುದು. ಈ ನಿಯಮವು ಕೇವಲ ಸಾರ್ವಜನಿಕವಾಗಿ ಮಾಡುವ ಪೋಸ್ಟ್’ಗಳಿಗೆ ಅನ್ವಯವಾಗುವುದು, ಖಾಸಗಿ ಅಥವಾ ಕ್ಲೋಸ್ಡ್ ಗ್ರೂಪ್ ಗಳಿಗೆ ಅನ್ವಯಿಸುವುದಿಲ್ಲ.

ಕೇವಲ ಫೇಸ್ಬುಕ್ ಅಲ್ಲದೇ ವಾಟ್ಸಪ್ ಸೇರಿದಂತೆ ಇತರ ಎಲ್ಲಾ ಸೋಶಿಯಲ್ ಮೀಡಿಯಾ ಪೋಸ್ಟ್’ಗಳಿಗೆ ಕೋರ್ಟ್ ಆದೇಶ ಅನ್ವಯವಾಗುವುದೆಂದು ಹೇಳಲಾಗಿದೆ.