ಕೋರ್ಟ್‌ ಕಟಕಟೆಯಲ್ಲಿ ಸಂವಿಧಾನದ ಪುಸ್ತಕ ಹಿಡಿದು ‘ನಾನು ಸತ್ಯವನ್ನೇ ಹೇಳುತ್ತೇನೆ. ಸತ್ಯವನ್ನಲ್ಲದೇ ಬೇರೇನನ್ನೂ ಹೇಳುವುದಿಲ್ಲ’ ಎಂದು ಪ್ರಮಾಣ ಮಾಡಿಸಿಕೊಳ್ಳುತ್ತಾರೆ. ಇದೇ ಪ್ರೇರಣೆಯೋ ಎಂಬಂತೆ ಒಡಿಶಾದ ಗಂಜಾಮ್‌ ಜಿಲ್ಲೆಯ ಜೋಡಿಯೊಂದು ಧಾರ್ಮಿಕ ಆಚರಣೆಗಳನ್ನು ಬದಿಗಿಗೊತ್ತಿ ಸಂವಿಧಾನದ ಮೇಲೆ ಪ್ರಮಾಣ ಮಾಡುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.

ಅಲ್ಲದೇ ತಮ್ಮ ಮದುವೆಯ ವೇಳೆ ರಕ್ತದಾನ ಶಿಬಿರವನ್ನು ಆಯೋಜಿಸಿದ್ದಾರೆ. ಔಷಧ ತಯಾರಿಕಾ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಪ್ಲಬ್‌ ಕುಮಾರ್‌ ಹಾಗೂ ಅನೀತಾ ಈ ರೀತಿ ವಿಶಿಷ್ಟವಿವಾಹದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ಮದುವೆಯಲ್ಲಿ ಪುರೋಹಿತರ ಬದಲು ನಿವೃತ್ತ ಸರ್ಕಾರಿ ಉದ್ಯೊಗಿಯೊಬ್ಬರು ನವ ದಂಪತಿಗಳಿಗೆ ಸಂವಿಧಾನದ ಮೇಲೆ ಕೈ ಇರಿಸಿ ಪ್ರಮಾಣ ವಚನ ಭೋಧಿಸಿದ್ದಾರೆ.