Asianet Suvarna News Asianet Suvarna News

ಒಡಿಶಾದಲ್ಲಿ ಫನಿ ದಾಳಿಗೆ ಮತ್ತೆ 21 ಸಾವು: ಸಾವಿನ ಸಂಖ್ಯೆ 64ಕ್ಕೆ ಏರಿಕೆ

ಮೇ 3ರಂದು ಪ್ರತೀ ಗಂಟೆಗೆ 240 ಕಿ.ಮೀ ವೇಗವಾಗಿ ಅಪ್ಪಳಿಸಿದ ಫನಿ ಚಂಡಮಾರುತ| ಒಡಿಶಾ; ಫನಿ ದಾಳಿಗೆ ಮತ್ತೆ 21 ಸಾವು: ಒಟ್ಟು ಸಾವಿನ ಸಂಖ್ಯೆ 64ಕ್ಕೆ ಏರಿಕೆ| 

Odisha confirms 21 more deaths Cyclone Fani toll hits 64
Author
Bangalore, First Published May 13, 2019, 9:17 AM IST

ಭುವನೇಶ್ವರ[ಮೇ.13]: ಫೋನಿ ಚಂಡಮಾರುತಕ್ಕೆ ಸಂಬಂಧಿಸಿದ ಘಟನೆಗಳಲ್ಲಿ ಒಡಿಶಾದಲ್ಲಿ ಮತ್ತೆ 21 ಮಂದಿ ಸಾವನ್ನಪ್ಪಿದ್ದಾರೆ ಎಂದು ಒಡಿಶಾ ಸರ್ಕಾರ ಹೇಳಿದೆ. ಈ ಮೂಲಕ ರಾಜ್ಯದಲ್ಲಿ ಫೋನಿ ಚಂಡಮಾರುತ ಒಟ್ಟು 64 ಮಂದಿಯನ್ನು ಬಲಿಪಡೆದಂತಾಗಿದೆ.

ಮೇ 3ರಂದು ಪ್ರತೀ ಗಂಟೆಗೆ 240 ಕಿ.ಮೀ ವೇಗವಾಗಿ ಅಪ್ಪಳಿಸಿದ ಫೋನಿ ಚಂಡಮಾರುತ ಪರಿಣಾಮ ಒಡಿಶಾದ ಪುರಿಯಲ್ಲಿ ಭಾರೀ ಪ್ರಮಾಣ ಮಳೆಯಾಗಿತ್ತು. ಅಲ್ಲದೆ, ಈ ಘಟನೆಯಲ್ಲಿ 241ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಪೈಕಿ ಇದೀಗ ಮೃತರಾದವರ ಸಂಖ್ಯೆ 64ಕ್ಕೆ ಏರಿಕೆಯಾಗಿದೆ.

ಇದುವರೆಗೂ ಪುರಿ ಜಿಲ್ಲೆಯಲ್ಲಿ 39 ಮಂದಿ, ಖುರ್ದಾ ಜಿಲ್ಲೆಯಲ್ಲಿ 9, ಕಠಕ್‌ ಜಿಲ್ಲೆಯಲ್ಲಿ 6, ಮಯೂರಭಂಜ್‌ನಲ್ಲಿ 4 ಹಾಗೂ ಕೇಂದ್ರಪಾರ ಹಾಗೂ ಜೈಪುರ ಜಿಲ್ಲೆಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ತುರ್ತು ಪರಿಸ್ಥಿತಿ ಕಾರ್ಯಾಚರಣೆ ಕೇಂದ್ರ ತಿಳಿಸಿದೆ.

Follow Us:
Download App:
  • android
  • ios