ಅಕ್ಟೋಬರ್ ಹಾಗೂ ನವೆಂಬರ್ ತಿಂಗಳು ಕರುನಾಡಿದ ಜನತೆಗೆ ಅತ್ಯಂತ ಕರಾಳಮಯವಾದ ತಿಂಗಳಾಗಿದ್ದವು. ಈ ತಿಂಗಳಲ್ಲಿ ರಾಜ್ಯದಲ್ಲಿ ದುರಂತಗಳ ಸರಮಾಲೆಯೇ ನಡೆಯಿತು.
ಬೆಂಗಳೂರು: ಕನ್ನಡಿಗರು ಸಂಭ್ರಮಿಸುವ ನವೆಂಬರ್ ಹಾಗೂ ಕಳೆದ ತಿಂಗಳು ಅಕ್ಟೋಬರ್ ಈ ವರ್ಷದಲ್ಲಿ ದುಃಖದ ಮಾಸವಾಗಿ ಪರಿಣಮಿಸಿವೆ. ತಿಂಗಳಿಡೀ ರಾಜ್ಯೋತ್ಸವ ಆಚರಿಸುವ ಸಂಭ್ರಮಿಸುವ ಕನ್ನಡಿಗರು ನವೆಂಬರ್ ತಿಂಗಳಲ್ಲೇ ಅನೇಕ ಗಣ್ಯರನ್ನು ಕಳೆದುಕೊಂಡಿದೆ. 25 ವರ್ಷಗಳಿಂದ ಸಂಸದರಾಗಿ, ಸಚಿವರಾಗಿ ದೆಹಲಿಯಲ್ಲಿ ರಾಜ್ಯದ ದನಿ ಎತ್ತುವುದರಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಅನಂತಕುಮಾರ್ ಅವರನ್ನು ಇತ್ತೀಚೆಗೆಷ್ಟೆ ಕಳೆದುಕೊಂಡಿತು.
ಶನಿವಾರ ಬೆಂಗಳೂರಿನಲ್ಲಿ ಅನಂತಕುಮಾರ್ ಅವರ ವೈಕುಂಠ ಸಮಾರಾಧನೆ ನಡೆಯುತ್ತಿದ್ದರೆ, ಅತ್ತ ಮಂಡ್ಯದಲ್ಲಿ ಕಾಲುವೆಗೆ ಬಸ್ ಬಿದ್ದ 30 ಜನರು ಮೃತಪಟ್ಟರು. ಇಂತಹ ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ ನಾಡಿನ ಅಂಬರೀಶ್ ಅವರ ಹಠಾತ್ ಅಗಲಿಕೆ ನಾಡಿನ ಜನತೆಗೆ ಬಹುದೊಡ್ಡ ಶಾಕ್ ನೀಡಿದೆ.
ಕಳೆದ ತಿಂಗಳಷ್ಟೇ ಅತ್ಯಂತ ಪ್ರಗತಿಪರವಾಗಿ ಚಿಂತನೆ ಮಾಡುತ್ತಿದ್ದ ಗದಗದ ತೋಂಟದ ಸಿದ್ದಲಿಂಗ ಸ್ವಾಮಿಗಳನ್ನು ಕಳೆದುಕೊಂಡಿತ್ತು. ಇದಾದ ನಂತರ ಇನ್ನೂ ಸಾಕಷ್ಟು ರಾಜಕೀಯ ಭವಿಷ್ಯ ಕಾಣಬೇಕಿದ್ದ ಮಾಜಿ ಸಚಿವ ದಿವಂಗತ ಎಂ.ಪಿ. ಪ್ರಕಾಶ್ ಅವರ ಪುತ್ರ ಎಂ.ಪಿ.ರವೀಂದ್ರ ನಿಧನರಾಗಿದ್ದನ್ನು ಸ್ಮರಿಸಬಹುದು.
