ವಿವಾದಗ್ರಸ್ಥ ವ್ಯಕ್ತಿಯ ಜಯಂತಿ ಮಾಡುವ ಬದಲು ಅಬ್ದುಲ್ ಕಲಾಂ ಜಯಂತಿ ಆಚರಣೆ ಮಾಡಲಿ ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ. ಅಬ್ದುಲ್ ಕಲಾಂ, ದಿವಾನ್ ಮಿರ್ಜಾ ಇಸ್ಮಾಯಿಲ್ ಜಯಂತಿ ಆಚರಣೆ ಮಾಡಲಿ. ಅದಕ್ಕೆ ನಮ್ಮ ಬೆಂಬಲ ಇದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುವಾಗ ಹೇಳಿದರು.

ಚಿಕ್ಕಮಗಳೂರು: ವಿವಾದಗ್ರಸ್ಥ ವ್ಯಕ್ತಿಯ ಜಯಂತಿ ಮಾಡುವ ಬದಲು ಅಬ್ದುಲ್ ಕಲಾಂ ಜಯಂತಿ ಆಚರಣೆ ಮಾಡಲಿ ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಬ್ದುಲ್ ಕಲಾಂ, ದಿವಾನ್ ಮಿರ್ಜಾ ಇಸ್ಮಾಯಿಲ್ ಜಯಂತಿ ಆಚರಣೆ ಮಾಡಲಿ. ಅದಕ್ಕೆ ನಮ್ಮ ಬೆಂಬಲ ಇದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುವಾಗ ಹೇಳಿದರು.

ಆದರೆ, ಟಿಪ್ಪು ಜಯಂತಿಗೆ ನಮ್ಮ ತೀವ್ರ ವಿರೋಧ ಇದೆ. ಪಕ್ಷವೂ ಟಿಪ್ಪು ಜಯಂತಿಯನ್ನು ತೀವ್ರವಾಗಿ ಖಂಡಿಸುತ್ತದೆ. ಸಿಎಂ ಮಾಂಸ ತಿಂದು ಧರ್ಮಸ್ಥಳದ ದೇವಾಲಯದೊಳಗೆ ಹೋಗಿರುವ ಬಗ್ಗೆ ವಿರೋಧವಿಲ್ಲ. ನಾವೆಲ್ಲ ಧರ್ಮಸ್ಥಳಕ್ಕೆ ಹೋಗುವಾಗ ಸ್ನಾನ ಮಾಡಿ ಶುಚಿಯಾಗಿ ಹೋಗುತ್ತೇವೆ ಎಂದರು.

ದೇಹದ ಸ್ವಚ್ಛತೆ, ಮನಸ್ಸಿನ ಸ್ವಚ್ಛತೆಯ ಪ್ರತಿಬಿಂಬ ಎಂದು ಹೇಳುತ್ತಾರೆ. ಸಿಎಂ ಮನಸ್ಸು ಹಾಗೇ ಇದೆ, ದೇಹನೂ ಹಾಗೇ ಇದೆ ಅನಿಸುತ್ತಿದೆ ಎಂದು ಆರೋಪಿಸಿದರು.