ಪ್ರತಾಪ್ ಸಿಂಹ ಬೆಂಬಲಿಗರಿಂದ ರಾಣಿ ಚೆನ್ನಮ್ಮ ಹಾಗೂ ವೀರ ವನಿತೆ ಓಬವ್ವಳಿಗೆ ಅವಮಾನ ಮಾಡುವಂತಹ ಪೋಸ್ಟ್ ಹಾಕಿದ್ದಾರೆ. ರಾಣಿ ಚೆನ್ನಮ್ಮ ಹಾಗೂ ಒನಕೆ ಓಬವ್ವರಿಗೆ ಭಾರೀ ಅವಮಾನ ಮಾಡುವ ಮೂಲಕ ಕನ್ನಡಿಗರ ಸ್ವಾಭಿಮಾನಕ್ಕೆ ಸಂಸದ ಪ್ರತಾಪ್ ಸಿಂಹ ಬೆಂಬಲಿಗರು ಪೆಟ್ಟು ಕೊಟ್ಟಿದ್ದಾರೆ.
ಬೆಂಗಳೂರು: ಪ್ರತಾಪ್ ಸಿಂಹ ಬೆಂಬಲಿಗರಿಂದ ರಾಣಿ ಚೆನ್ನಮ್ಮ ಹಾಗೂ ವೀರ ವನಿತೆ ಓಬವ್ವಳಿಗೆ ಅವಮಾನ ಮಾಡುವಂತಹ ಪೋಸ್ಟ್ ಹಾಕಿದ್ದಾರೆ. ರಾಣಿ ಚೆನ್ನಮ್ಮ ಹಾಗೂ ಒನಕೆ ಓಬವ್ವರಿಗೆ ಭಾರೀ ಅವಮಾನ ಮಾಡುವ ಮೂಲಕ ಕನ್ನಡಿಗರ ಸ್ವಾಭಿಮಾನಕ್ಕೆ ಸಂಸದ ಪ್ರತಾಪ್ ಸಿಂಹ ಬೆಂಬಲಿಗರು ಪೆಟ್ಟು ಕೊಟ್ಟಿದ್ದಾರೆ.
ಪ್ರತಾಪ್ ಸಿಂಹ ಫಾರ್ ಸಿಎಂ ಹಾಗೂ ಐ ಸಪೋರ್ಟ್ ಪ್ರತಾಪ್ ಸಿಂಹ ಫೇಸ್ ಬುಕ್ ಪೇಜ್ನಲ್ಲಿ ಪದ್ಮಾವತಿ ಚಲನಚಿತ್ರ ವಿರೋಧಿಸುವ ಭರದಲ್ಲಿ ವೀರರಾಣಿಯರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಲಾಗಿದ್ದು, ಚೆನ್ನಮ್ಮ ಬ್ರಿಟೀಷರ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು, ಓಬವ್ವ ಹೈದರಾಲಿ ಜೊತೆ ಮಂಚ ಹಂಚಿಕೊಂಡಿದ್ದಳು ಎನ್ನಲಾಗಿದೆ.

ಪದ್ಮಾವತಿ ಚಲನಚಿತ್ರದ ಬೆಂಬಲಕ್ಕೆ ನಿಂತಿರೋ ಕನ್ನಡ ಚಿತ್ರರಂಗದ ನಡೆ ವಿರೋಧಿಸಿ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಲಾಗಿದ್ದು, ಬಳಿಕ, ಕೋಪ ಬಂತಲ್ವಾ? ಎಂದು ಪೋಸ್ಟ್ ಮಾಡಿರುವ ಪ್ರತಾಪ್ ಬೆಂಬಲಿಗರು, ಹಾಗಿದ್ರೆ ಕನ್ನಡ ಚಿತ್ರರಂಗಕ್ಕೆ ಇಂಥ ಕಥೆಗಳ ವಿರುದ್ದ ಕೋಪ ಬರ್ತಿಲ್ವಾ ಎಂದು ಪ್ರಶ್ನಿಸಿದ್ದಾರೆ.
ಉದಾಹರಣೆ ಕೊಡೋ ಭರದಲ್ಲಿ ವೀರರಾಣಿಯರಿಗೆ ಘೋರ ಅಪಮಾನ ಮಾಡಿರುವ ಬಗ್ಗೆ ಫೇಸ್ ಬುಕ್ ಪೇಜ್ನಲ್ಲೇ ಜನ ಸಾಮಾನ್ಯರು ತರಾಟೆಗೆ ತೆಗೆದುಕೊಂಡಿದ್ದಾರೆ.
ಆದರೆ ಸಂಸದ ಪ್ರತಾಪ್ ಸಿಂಹ ಅದಕ್ಕೂ ತನಗೂ ಯಾವುದೇ ಸಂಬಂಧವಿಲ್ಲವೆಂದು ಹೇಳಿದ್ದಾರೆ.
