ವಿಶ್ವಸಂಸ್ಥೆ ನಿರ್ಣಯದ ವಿರುದ್ಧ ವಿಟೋ ಅಧಿಕಾರ ಬಳಸಲು ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಯಸಿದ್ದರೆ, ಬರಾಕ್ ಒಬಾಮ ಇಸ್ರೇಲ್ ವಿರುದ್ಧದ ನಿರ್ಣಯವನ್ನು ಬೆಂಬಲಿಸಿದ್ದಾರೆ.

ವಾಷ್ಟಿಂಗ್ಟನ್ (ಡಿ.25): ಪ್ಯಾಲೆಸ್ಟೈನ್ ಆಕ್ರಮಿತ ಪ್ರದೇಶದಲ್ಲಿ ತನ್ನ ನೆಲೆಯನ್ನು ಸ್ಥಾಪಿಸಿರುವ ಇಸ್ರೇಲ್ ವಿರುದ್ಧದ ವಿಶ್ವಸಂಸ್ಥೆ ನಿರ್ಣಯವನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಬೆಂಬಲಿಸಿದ್ದಾರೆ.

ಇದಕ್ಕೆ ಅಮೆರಿಕದ ನಡೆಯನ್ನು ಅವಮಾನಕಾರಿ ಎಂದು ಇಸ್ರೇಲ್ ಬೇಸರ ವ್ಯಕ್ತಪಡಿಸಿದೆ. ವೆಸ್ಟ್ ಬ್ಯಾಂಕ್ ಹಾಗೂ ಪೂರ್ವ ಜರುಸಲೇಮ್'ಗಳಲ್ಲಿ ಇಸ್ರೇಲ್ ತನ್ನ ನೆಲೆಯನ್ನು ಸ್ಥಾಪಿಸಿದ್ದ ಕ್ರಮವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಂಡಿಸಿತ್ತು.

ವಿಶ್ವಸಂಸ್ಥೆ ನಿರ್ಣಯದ ವಿರುದ್ಧ ವಿಟೋ ಅಧಿಕಾರ ಬಳಸಲು ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಯಸಿದ್ದರೆ, ಬರಾಕ್ ಒಬಾಮ ಇಸ್ರೇಲ್ ವಿರುದ್ಧದ ನಿರ್ಣಯವನ್ನು ಬೆಂಬಲಿಸಿದ್ದಾರೆ.

ವಿಶ್ವಸಂಸ್ಥೆ ನಿರ್ಣಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ವಿಶ್ವಸಂಸ್ಥೆಯ ಬೇಡಿಕೆಗಳನ್ನು ಒಪ್ಪುವುದಿಲ್ಲ ಎಂದಿದ್ದಾರೆ.