ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ವೈಯಕ್ತಿಕ ಇಮೇಲ್'ನ ಕೆಲ ವೈಯುಕ್ತಿಕ ಮಾಹಿತಿ  ಸೋರಿಕೆಯಾಗಿದೆ

ವಾಷಿಂಗ್ಟನ್(ಅ.22): ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ವೈಯಕ್ತಿಕ ಇಮೇಲ್ ಹ್ಯಾಕ್ ಮಾಡಲಾಗಿದ್ದು, ಈ ಬಗ್ಗೆ ಸ್ವತಃ ವಿಕಿಲೀಕ್ಸ್ ಸಂಸ್ಥೆ ಟ್ವೀಟ್ ಮಾಡಿದೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ವೈಯಕ್ತಿಕ ಇಮೇಲ್'ನ ಕೆಲ ವೈಯುಕ್ತಿಕ ಮಾಹಿತಿ ಸೋರಿಕೆಯಾಗಿದೆ ಎಂದು ಹೇಳಿದೆ. 2008 ನವೆಂಬರ್ 4 ರ ಸಂಜೆ ಬರಾಕ್ ಒಬಮಾ ಅವರು ಜಾನ್ ಪೊಡೆಸ್ಚಾ ಅವರಿಗೆ ಬರೆದಿದ್ದ ಇಮೇಲ್ ಸೋರಿಕೆಯಾಗಿರುವುದಾಗಿ ತಿಳಿಸಿದೆ. ಪೊಡಾಸ್ಟಾ ಹಾಗೂ ಒಬಾಮ ಅವರ ನಡುವೆ ನಡೆದಿದೆ ಎನ್ನಲಾದ ಸುಮಾರು 23 ಸಾವಿರ ಇಮೇಲ್ ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred