ಅಮೇರಿಕಾ ನಡೆಸಿದ ಬಾಂಬ್ ದಾಳಿಯಲ್ಲಿ 90 ಮಂದಿ ಐಸಿಎಸ್ ಉಗ್ರರು ಮೃತಪಟ್ಟಿದ್ದಾರೆ ಎಂದು ಅಫ್ಘಾನಿಸ್ತಾನ ಅಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿ (ಏ.15): ಅಮೇರಿಕಾ ನಡೆಸಿದ ಬಾಂಬ್ ದಾಳಿಯಲ್ಲಿ 90 ಮಂದಿ ಐಸಿಎಸ್ ಉಗ್ರರು ಮೃತಪಟ್ಟಿದ್ದಾರೆ ಎಂದು ಅಫ್ಘಾನಿಸ್ತಾನ ಅಧಿಕಾರಿಗಳು ತಿಳಿಸಿದ್ದಾರೆ.

ಬಾಂಬ್ ಗಳ ತಾಯಿ ಎನ್ನಲಾಗುವ ಜಿಬಿಯು-43/ಬಿ ಎನ್ನುವ ಬೃಹತ್ ಬಾಂಬನ್ನು ಅಮೇರಿಕಾ ಅಫಘಾನ್ ನ ಐಸಿಎಸ್ ನೆಲೆಯ ಮೇಲೆ ಹಾಕಿದ್ದು, ಕನಿಷ್ಟ 90 ಮಂದಿ ಉಗ್ರರು ಸಾವನ್ನಪ್ಪಿದ್ದಾರೆ. ಆದರೆ ಸೇನೆ ಹಾಗೂ ನಾಗರೀಕರ ಮೇಲೆ ಯಾವುದೇ ಹಾನಿಯಾಗಿಲ್ಲ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.