ಕ್ರೀಡಾಕೂಟ ಆಯೋಜನೆಗೊಂಡಿರುವ ಪೆಂಗೊಚಾಂಗ್ ನಗರದಿಂದ 80 ಕಿ.ಮೀ ದೂರದಲ್ಲಿ ಅಣು ಪರೀಕ್ಷೆ ನಡೆಸಲಾಗಿತ್ತು.

ಲಿಮ (ಪೆರು): 2018ರಲ್ಲಿ ದಕ್ಷಿಣ ಕೊರಿಯಾದಲ್ಲಿ ಆಯೋಜನೆಗೊಂಡಿರುವ ಚಳಿಗಾಲದ ಒಲಿಂಪಿಕ್ಸ್'ಗೆ ಯಾವುದೇ ಆತಂಕವಿಲ್ಲ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಅಧ್ಯಕ್ಷ ಥಾಮಸ್ ಬಾಕ್ ತಿಳಿಸಿದ್ದಾರೆ.

ಕೊರಿಯಾದ ಗಡಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಭದ್ರತೆ ವಿಷಯದಲ್ಲಿ ಪ್ರಶ್ನೆ ಉದ್ಭವಿಸಿದೆ. ಕ್ರೀಡಾಕೂಟ ಆಯೋಜನೆಗೊಂಡಿರುವ ಪೆಂಗೊಚಾಂಗ್ ನಗರದಿಂದ 80 ಕಿ.ಮೀ ದೂರದಲ್ಲಿ ಅಣು ಪರೀಕ್ಷೆ ನಡೆಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಸ್ಪಷ್ಟಿಕರಣ ನೀಡಿರುವ ಬಾಕ್, ‘ಕ್ರೀಡಾಕೂಟಕ್ಕೆ ಸೂಕ್ತ ಭದ್ರತೆ ಒದಗಿಸಲಾಗಿದೆ. ಯಾವುದೇ ಬೆದರಿಕೆ ಇಲ್ಲ. ಈ ಕುರಿತು ಸಣ್ಣ ಸುಳಿವು ಸಹ ಲಭ್ಯವಾಗಿಲ್ಲ’ ಎಂದು ಹೇಳಿದ್ದಾರೆ.