ನವದೆಹಲಿ[ಜೂ. 03] ಭಾರತ ಸರಕಾರ ಸೋಮವಾರ ಅಜಿತ್ ದೋವಲ್ ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಪುನರ್ ನೇಮಕ ಮಾಡಿದೆ. ದೋವೆಲ್ ಅವರಿಗೆ ರಾಜ್ಯ ಖಾತೆ ಸಚಿವರ ಮಾನ್ಯತೆ ನೀಡಲಾಗಿದೆ. ಮುಂದೆ 5 ವರ್ಷಗಳ ಕಾಲ ದೋವಲ್ ಕಾರ್ಯನಿರ್ವಹಿಸಲಿದ್ದಾರೆ. 

ಮೋದಿ ಅವಧಿಯಲ್ಲೇ ಮೊದಲ ಸರ್ಜಿಕಲ್ ಸ್ಟ್ರೈಕ್: ಸೇನಾಧಿಕಾರಿಯ ಅಧಿಕೃತ ಹೇಳಿಕೆ

ಉಗ್ರರ ಹುಟ್ಟು ಅಡಗಿಸಿದ ಬಾಲಾಕೋಟ್ ಹಾಗೂ 2016 ರ ಸರ್ಜಿಕಲ್ ಸ್ಟ್ರೈಕ್ ನ ಮಾಸ್ಟರ್ ಮೈಂಡ್ ಅಜಿತ್ ದೋವಲ್ 2014 ರಿಂದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ.

1968 ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದ ದೋವಲ್ ಗುಪ್ತಚರ ವಿಭಾಗದಲ್ಲಿ ಹಲವು ವರ್ಷ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದು ಕ್ಯಾಬಿನೆಟ್ ದರ್ಜೆ ಸ್ಥಾನ ಮಾನದಲ್ಲಿ ಮುಂದುವರಿಯಲಿದ್ದಾರೆ.