2016 ರಲ್ಲಿ ಹೊಸದಾಗಿ ಚಲಾವಣೆಗೆ ಬಂದಿರುವ 2000 , 500, 100, 50, 20 ಮತ್ತು  10 ರು. ಮುಖಬೆಲೆಯ ಹರಿದ ನೋಟುಗಳನ್ನು ಹೊಸ ನೋಟಿನ ಜೊತೆ ವಿನಿಮಯ ಮಾಡಿಕೊಳ್ಳಲು ಆರ್‌ಬಿಐ ಜನಕ್ಕೆ ಅನುವು ಮಾಡಿಕೊಟ್ಟಿದೆ. 

ಮುಂಬೈ: ತುಂಡಾದ ಅಥವಾ ಹರಿದ ರುಪಾಯಿ ನೋಟುಗಳ ವಿನಿಮಯ ನಿಯಮಗಳನ್ನು ಆರ್ ಬಿಐ ಬದಲಾವಣೆ ಮಾಡಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಮೂಲಕ 2016 ರಲ್ಲಿ ಹೊಸದಾಗಿ ಚಲಾವಣೆಗೆ ಬಂದಿರುವ 2000 , 500, 100, 50, 20 ಮತ್ತು 10 ರು. ಮುಖಬೆಲೆಯ ಹರಿದ ನೋಟುಗಳನ್ನು ಹೊಸ ನೋಟಿನ ಜೊತೆ ವಿನಿಮಯ ಮಾಡಿಕೊಳ್ಳಲು ಆರ್‌ಬಿಐ ಜನಕ್ಕೆ ಅನುವು ಮಾಡಿಕೊಟ್ಟಿದೆ. 

ಇದು ವರೆಗೆ ವಿವಿಧ ಸರಣಿಯ ಹರಿದ ಹೊಸ ನೋಟುಗಳ ಬದಲಾವಣೆಗೆ ಅವಕಾಶವಿರಲಿಲ್ಲ. ಆರ್‌ಬಿಐನ ಆಯ್ದ ಕಚೇರಿಗಳಲ್ಲಿ ಜನರು, ಹರಿದ ನೋಟುಗಳನ್ನು ಹೊಸ ನೋಟುಗಳೊಂದಿಗೆ ವಿನಿಮಯ ಮಾಡಿಕೊಳ್ಳಬಹುದಾಗಿದೆ.