ಕೇಂದ್ರ ಸರ್ಕಾರ ಬಿಗ್ ಬಜಾರ್ ಹಾಗೂ ಫ್ಯಾಶನ್ ಹಬ್'ಗಳಲ್ಲಿ ಪ್ರತಿ ವ್ಯಕ್ತಿಗೆ ಬ್ಯಾಂಕ್ ನಿಯಮಗಳ ರೀತಿಯಲ್ಲಿಯೇ ಜಾರಿಗೊಳಿಸಲು ಮುಂದಾಗಿದೆ 

ನವದೆಹಲಿ(ನ.22): ಇತ್ತೀಚಿಗಷ್ಟೆ ಆಯ್ದ ಪೆಟ್ರೋಲ್ ಬಂಕ್'ಗಳಲ್ಲಿ 2 ಸಾವಿರ ರೂ.ಗಳನ್ನು ವಿತ್ ಡ್ರಾ ಮಾಡಿಕೊಳ್ಳುವ ಅವಕಾಶ ಕಲ್ಪಿಸಿರುವ ಕೇಂದ್ರ ಸರ್ಕಾರ ಬಿಗ್ ಬಜಾರ್ ಹಾಗೂ ಫ್ಯಾಶನ್ ಹಬ್'ಗಳಲ್ಲಿ ಪ್ರತಿ ವ್ಯಕ್ತಿಗೆ ಬ್ಯಾಂಕ್ ನಿಯಮಗಳ ರೀತಿಯಲ್ಲಿಯೇ 2 ಸಾವಿರ ರೂ. ಹಣ ಪಡೆದುಕೊಳ್ಳುವ ಅವಕಾಶ ಕಲ್ಪಿಸಲು ಮುಂದಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿ ನೇರ ಹಣ ವರ್ಗಾವಣೆಗೆ ಅವಕಾಶವಿಲ್ಲ. ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ ವಿತ್'ಡ್ರಾ ಮಾಡಿಕೊಳ್ಳಬಹುದು.ಈ ಯೋಜನೆ ನ.24 ರಂದು ಜಾರಿಗೆ ಬರುವ ಸಾಧ್ಯತೆಯಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.