ಸ್ಯಾಂಡಲ್ ವುಡ್ ನ ಮತ್ತೋರ್ವ ನಟಿ ಇದೀಗ ತಮ್ಮ ಮೀ ಟೂ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ತಾವೂ ಕೂಟ ಕಿರುಕುಳವನ್ನು ಎದುರಿಸಿದ್ದಾಗಿ ಹೇಳಿದ್ದಾರೆ. 

ತುಮಕೂರು : ಹಿರಿಯ ಕಲಾವಿದೆ ಬಿ. ಜಯಶ್ರಿ ಅವರು ತಮಗೂ ಮೀ ಟೂ ಅನುಭವವಾಗಿದ್ದಾಗಿ ಹೇಳಿದ್ದಾರೆ. 

Add Asianetnews Kannada as a Preferred SourcegooglePreferred

ತುಮಕೂರಿನಲ್ಲಿ ಮಾತನಾಡಿದ ಅವರು ತಾವು ಈಗ ಈ ಬಗ್ಗೆ ಹೇಳಿಕೊಳ್ಳುತ್ತಿದ್ದೇನೆ. ನನಗೆ ನ್ಯಾಯ ಸಿಗಲಿ ಎನ್ನುವ ಉದ್ದೇಶದಿಂದ ಅಲ್ಲಾ. ನನಗಾದ ಅನ್ಯಾಯ ಇನ್ನೊಬ್ಬರಿಗೆ ಆಗದಿರಲಿ ಎಂದು ಈ ಮಾತನ್ನು ಹೇಳಿದ್ದಾಗಿ ಹೇಳಿದ್ದಾರೆ.

ನನ್ನಿಂದ ಇನ್ನೊಬ್ಬರು ಎಚ್ಚೆತ್ತುಕೊಳ್ಳಲಿ ಎಂದು ಹೇಳುತ್ತೇನೆ. ಕೆಲವೊಮ್ಮೆ ನನ್ನ ಖಾಸಗಿ‌ ವಿಚಾರ ಯಾಕೆ ಹೇಳಲಿ ಅಂದುಕೊಳ್ಳುತ್ತೇನೆ. ನನ್ನ ಪುಸ್ತಕ ಕಣ್ಣ ಮುಚ್ಚೆ ಕಾಡೆಗೂಡೆಯಲ್ಲಿ ಎಲ್ಲವನ್ನೂ ಬರೆದಿದ್ದೆನೆ ಎಂದು ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ಜನ್ಮ ಕೊಟ್ಟ ಮಗುವಿನ ತಂದೆ ಯಾರು ಎಂದು ತಾಯಿಗೆ ಮಾತ್ರ ಗೊತ್ತಾಗತ್ತದೆ. ತಂದೆಗೆ ಗೊತ್ತಾಗುವುದಿಲ್ಲ ಎಂದಿರುವ ಅವರು ಅಂತಹ ನೋವನ್ನು ಹೇಳಿದರೆ ನೀವು ನಂಬುವುದಿಲ್ಲ. ಅಂತಹ ನೋವನ್ನು ಹೇಳಿಕೊಳ್ಳುವುದು ತಪ್ಪೆಂದು ಹೇಳುವುದಿಲ್ಲ ಎಂದಿದ್ದಾರೆ.

ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಅನೇಕ ನಟಿಯರು ತಮ್ಮ ಮೀ ಟೂ ಅನುಭವವನ್ನು ಹಂಚಿಕೊಂಡಿದ್ದು ಇದೀಗ ಈ ಸಾಲಿಗೆ ಹಿರಿಯ ನಟಿ, ರಂಗಭೂಮಿ ಕಲಾವಿದೆ ಬಿ.ಜಯಶ್ರೀ ಅವರೂ ಕೂಡ ಸೇರಿದ್ದಾರೆ.