ಪ್ರಧಾನಮಂತ್ರಿ ಆವಾಸ್‌ ಯೋಜನೆಯ ಅಡಿಯಲ್ಲಿ ಸಬ್ಸಿಡಿ ಪಡೆಯಲು ಇದ್ದ ಕಾರ್ಪೆಟ್‌ ಏರಿಯಾ (ಮನೆಯಲ್ಲಿ ಬಳಕೆಗೆ ಸಿಗುವ ಜಾಗ) ಮಿತಿಯನ್ನು ಕೇಂದ್ರ ಸರ್ಕಾರ ಮಧ್ಯಮ ಆದಾಯದ ಗುಂಪು-1ನೇ ವರ್ಗಕ್ಕೆ 120 ಚದರ್‌ ಮೀಟರ್‌ನಿಂದ 160 ಚದರ್‌ ಮೀಟರ್‌ಗೆ ಹೆಚ್ಚಿಸಿದೆ. 

ನವದೆಹಲಿ: ಪ್ರಧಾನಮಂತ್ರಿ ಆವಾಸ್‌ ಯೋಜನೆಯ ಅಡಿಯಲ್ಲಿ ಸಬ್ಸಿಡಿ ಪಡೆಯಲು ಇದ್ದ ಕಾರ್ಪೆಟ್‌ ಏರಿಯಾ (ಮನೆಯಲ್ಲಿ ಬಳಕೆಗೆ ಸಿಗುವ ಜಾಗ) ಮಿತಿಯನ್ನು ಕೇಂದ್ರ ಸರ್ಕಾರ ಮಧ್ಯಮ ಆದಾಯದ ಗುಂಪು-1ನೇ ವರ್ಗಕ್ಕೆ 120 ಚದರ್‌ ಮೀಟರ್‌ನಿಂದ 160 ಚದರ್‌ ಮೀಟರ್‌ಗೆ ಹೆಚ್ಚಿಸಿದೆ. 

ಇನ್ನು ಮಧ್ಯಮ ಆದಾಯದ ಗುಂಪು-2ನೇ ವರ್ಗಕ್ಕೆ 150 ಚದರ ಮೀಟರ್‌ನಿಂದ 200 ಚದರ ಮೀಟರ್‌ಗೆ ಹೆಚ್ಚಿಸಿದೆ. ಸರ್ಕಾರದ ಈ ಕ್ರಮವನ್ನು ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಮತ್ತು ಮನೆ ಮಾರಾಟಗಾರರು ಶ್ಲಾಘಿಸಿದ್ದಾರೆ.

ರಿಯಲ್‌ ಎಸ್ಟೇಟ್‌ ಉದ್ಯಮ ಉತ್ತೇಜನ ದೊರೆಯುವ ನಿರೀಕ್ಷೆ ಇದೆ. ಆವಾಸ್‌ ಯೋಜನೆಯ ಅಡಿಯಲ್ಲಿ ಸರ್ಕಾರ ಪ್ರತಿ ಮನೆಗೆ 2.35 ಲಕ್ಷ ರು. ವರೆಗೂ ಸಬ್ಸಿಡಿ ನೀಡುತ್ತಿದೆ.