130 ವರ್ಷಗಳ ಇತಿಹಾಸ ಹೊಂದಿರುವ ವಿಶ್ವದ ಅತಿ ಹಳೇ ಮತ್ತು ವಿಶ್ವದ ಅತಿ ಜನಪ್ರಿಯ ಸಾಫ್ಟ್‌ ಡ್ರಿಂಕ್‌ ಎಂಬ ಕೀರ್ತಿಗೆ ಭಾಜನವಾಗಿರುವ ಕೋಕ ಕೋಲಾ ಕಂಪನಿ ಇದೀಗ ಹೊಸ ಇತಿಹಾಸ ಬರೆಯಲು ಮುಂದಾಗಿದೆ.

ಲಂಡನ್‌: 130 ವರ್ಷಗಳ ಇತಿಹಾಸ ಹೊಂದಿರುವ ವಿಶ್ವದ ಅತಿ ಹಳೇ ಮತ್ತು ವಿಶ್ವದ ಅತಿ ಜನಪ್ರಿಯ ಸಾಫ್ಟ್‌ ಡ್ರಿಂಕ್‌ ಎಂಬ ಕೀರ್ತಿಗೆ ಭಾಜನವಾಗಿರುವ ಕೋಕ ಕೋಲಾ ಕಂಪನಿ ಇದೀಗ ಹೊಸ ಇತಿಹಾಸ ಬರೆಯಲು ಮುಂದಾಗಿದೆ.

ಇದುವರೆಗೂ ಕೇವಲ ಸಾಫ್ಟ್‌ ಡ್ರಿಂಕ್‌ ಆಗಿದ್ದ ಕೋಕ ಕೋಲಾ ಇದೀಗ ಆಲ್ಕೋಹಾಲ್‌ ಅಂಶಗಳನ್ನೊಳಗೊಂಡ ಡ್ರಿಂಕ್‌ ಹೊರತರಲು ಮುಂದಾಗಿದ್ದು, ಈ ಮೂಲಕ ಹೊಸ ಪ್ರಯತ್ನಕ್ಕೆ ತೆರೆದುಕೊಳ್ಳಲು ನಿರ್ಧರಿಸಿದೆ. ಪ್ರಸ್ತುತ ಚು-ಹಿ ಎಂದೇ ಜನಪ್ರಿಯವಾದ ಜಪಾನ್‌ನ ಆಲ್ಕೋಪಾಪ್‌ ರೀತಿಯ ಮದ್ಯ ತಯಾರಿಗೆ ಪ್ರಯೋಗ ನಡೆಸಿದೆ. ಈ ಮದ್ಯದ ಬಾಟಲಿಗಳನ್ನು ಮೊದಲಿಗೆ ಜಪಾನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಈ ಬಗ್ಗೆ ಖಚಿತ ಪಡಿಸಿರುವ ಕೋಕ ಕೋಲಾ ಕೋಲಾ ಕಂಪನಿಯ ಜಪಾನ್‌ ಅಧ್ಯಕ್ಷ ಜಾಜ್‌ರ್‍ ಗಾರ್ಡುನೊ, ‘ಪೇಯಗಳನ್ನು ಬಳಸಿ, ಇದನ್ನು ತಯಾರಿಸಲಾಗಿದೆ ಎಂದಿದ್ದಾರೆ.