ಹೊಸ ಬ್ಯಾಂಕ್ ಅಕೌಂಟ್ ತೆರೆಯಲು ಮತ್ತು 50 ಸಾವಿರಕ್ಕಿಂತ ಜಾಸ್ತಿ ವ್ಯವಹಾರ ನಡೆಸಲು ಆಧಾರ್ ಕಾರ್ಡ್ ಕಡ್ಡಾಯವೆಂದು ಇಂದು ಸರ್ಕಾರ ಘೋಷಿಸಿದೆ.

ನವದೆಹಲಿ (ಜೂ.16): ಇನ್ಮುಂದೆ ಬ್ಯಾಂಕ್ ಅಕೌಂಟ್ ತೆರೆಯಲು ಮತ್ತು 50 ಸಾವಿರಕ್ಕಿಂತ ಜಾಸ್ತಿ ವ್ಯವಹಾರ ನಡೆಸಲು ಆಧಾರ್ ಕಾರ್ಡ್ ಕಡ್ಡಾಯವೆಂದು ಇಂದು ಸರ್ಕಾರ ಘೋಷಿಸಿದೆ.

ಈಗಾಗಲೇ ಬ್ಯಾಂಕ್ ಖಾತೆ ಹೊಂದಿರುವವರು ಈ ವರ್ಷದ ಡಿ.31 ರೊಳಗೆ ಆಧಾರ್ ಕಾರ್ಡ್ ಪ್ರತಿಯನ್ನು ಬ್ಯಾಂಕ್ ಗಳಿಗೆ ಸಲ್ಲಿಸಬೇಕು. ಒಂದು ವೇಳೆ ಸಲ್ಲಿಸಲು ವಿಫಲವಾದರೆ ಅಂತವರ ಖಾತೆಯನ್ನು ಅಮಾನ್ಯಗೊಳಿಸಲಾಗುವುದು ಎಂದು ಸರ್ಕಾರ ತನ್ನ ಘೋಷಣೆಯಲ್ಲಿ ಹೇಳಿದೆ.

ಪಾನ್ ಕಾರ್ಡ್, ಐಟಿ ರಿಟರ್ನ್ಸ್ ಗೆ ಆಧಾರ್ ಕಾರ್ಡನ್ನು ಕಡ್ಡಾಯಗೊಳಿಸಿದ ಐಟಿ ಕಾಯ್ದೆಯ ಸಿಂಧುತ್ವವನ್ನು ಇತ್ತೀಚಿಗೆ ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು. ಈ ಹಿನ್ನಲೆಯಲ್ಲಿ ಬ್ಯಾಂಕ್ ಖಾತೆಗೂ ಕೂಡಾ ಇಂದು ಆಧಾರನ್ನು ಕಡ್ಡಾಯಗೊಳಿಸಿದೆ.