ಕಾಂಗ್ರೆಸ್’ನಲ್ಲಿ ಹೆಣ್ಣು ಮಕ್ಕಳ ಸಪ್ಲೈ ಮಾಡುವವರಿಗೆ ವಿಶೇಷ ಆತಿಥ್ಯ : ನೀರಲಕೇರಿ

First Published 5, Apr 2018, 3:46 PM IST
Notice To Ph Niralakeri
Highlights

ಕಾಂಗ್ರೆಸ್ ಪಕ್ಷದಲ್ಲಿ ಹೆಣ್ಣು ಮಕ್ಕಳನ್ನು ಸಪ್ಲೈ ಮಾಡಿದವರಿಗೆ ವಿಶೇಷ ಆತಿಥ್ಯವಿದೆ ಎಂಬ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ  ಪಿ.ಎಚ್. ನಿರಲಕೇರಿಗೆ‌ ಪಕ್ಷದ ವರಿಷ್ಠರಿಂದ ಸ್ಪಷ್ಟೀಕರಣ ನೀಡಲು ಶೋಕಾಶ್ ನೋಟಿಸ್ ಜಾರಿ ಮಾಡಲಾಗಿದೆ.

ಧಾರವಾಡ: ಕಾಂಗ್ರೆಸ್ ಪಕ್ಷದಲ್ಲಿ ಹೆಣ್ಣು ಮಕ್ಕಳನ್ನು ಸಪ್ಲೈ ಮಾಡಿದವರಿಗೆ ವಿಶೇಷ ಆತಿಥ್ಯವಿದೆ ಎಂಬ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ  ಪಿ.ಎಚ್. ನಿರಲಕೇರಿಗೆ‌ ಪಕ್ಷದ ವರಿಷ್ಠರಿಂದ ಸ್ಪಷ್ಟೀಕರಣ ನೀಡಲು ಶೋಕಾಶ್ ನೋಟಿಸ್ ಜಾರಿ ಮಾಡಲಾಗಿದೆ.

ಮೂರು ದಿನಗಳಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಲು ನೋಟಿಸಲ್ಲಿ ತಾಕೀತು ಮಾಡಲಾಗಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರರಿಂದ ನೋಟಿಸ್ ಜಾರಿಯಾಗಿದೆ.

ಪಿ.ಎಚ್. ನಿರಲಕೇರಿ ಹಿರಿಯ ನ್ಯಾಯವಾದಿ ಮತ್ತು ಕಾಂಗ್ರೆಸ್ ಪಕ್ಷದ ಧಾರವಾಡ ನಾಯಕರಾಗಿದ್ದು, ಏಪ್ರಿಲ್ 3 ರಂದು ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು.  ಹುಬ್ಬಳ್ಳಿಯ ವಿಮಾನ ನಿಲ್ದಾಣದ ಒಳಗೆ ಪ್ರವೇಶ ನೀಡದ ಹಿನ್ನಲೆಯಲ್ಲಿ ಅಸಮಾಧಾನ ಹೊರಹಾಕಿದ ನಿರಲಕೇರಿ, ನಾಲ್ಕು ಜನ ಚೇಲಾಗಳನ್ನು, ಹೆಂಗಸರನ್ನು ಸಪ್ಲೈ ಮಾಡುವರಿಗೆ ಮಾತ್ರ ಕಾಂಗ್ರೆಸ್’ ನಲ್ಲಿ ಆದ್ಯತೆ ಎಂದಿದ್ದರು.

 ಪಕ್ಷದ ಸಂಘಟನೆ ಇವರಿಂದಲೇ ಆಗುತ್ತದೆಯಾ ಎಂದು ಪ್ರಶ್ನೆ ಮಾಡಿದ್ದು, ಕಾಂಗ್ರೆಸ್ ನಾಯಕರಿಗೆ ನಾಚಿಗೆಯಾಗಬೆಂಕೆಂದು ಅಸಮದಾನ ವ್ಯಕ್ತಪಡಿಸಿದ್ದರು. ಈ ನಿಟ್ಟಿನಲ್ಲಿ ಇದೀಗ ನೋಟಿಸ್ ಜಾರಿ ಮಾಡಲಾಗಿದೆ.

loader