ಬೆಂಗಳೂರು (ಜು. 28): ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿರುವ ಹಾಗೂ ಗುರುನಂದನ್ ಅಭಿನಯದ ರಾಜು ಕನ್ನಡ ಮೀಡಿಯಂ ಸಿನಿಮಾ ನಿರ್ಮಾಪಕರಿಂದ ಜಯಣ್ಣ ಫಿಲ್ಮ್ ಸಂಸ್ಥೆಗೆ   ಮೋಸವಾಗಿದೆ ಎನ್ನಲಾಗಿದೆ. 

ನಾಳೆ ಕನ್ನಡ ಜೀ ವಾಹಿನಿಯಲ್ಲಿ ರಾಜು ಕನ್ನಡ ಮೀಡಿಯಂ ಸಿನಿಮಾ ಪ್ರಸಾರ ಹಿನ್ನಲೆ ನಿರ್ಮಾಪಕ ಕೆ ಎ ಸುರೇಶ್’ಗೆ ಜಯಣ್ಣ ಫಿಲ್ಮ್ ಸಂಸ್ಥೆ ನೋಟಿಸ್ ನೀಡಿದೆ. 

ಜಯಣ್ಣ ಫಿಲ್ಮ್ ಸಂಸ್ಥೆಯಲ್ಲಿ ರಾಜು ಕನ್ನಡ ಮೀಡಿಯಂ ಸಿನಿಮಾ ರೈಟ್ಸ್ ಇದ್ದರೂ ನಿರ್ಮಾಪಕ ಕೆ ಎ ಸುರೇಶ್  ಬೇರೆ ವಾಹಿನಿಗೆ ರೈಟ್ಸ್ ನೀಡಿರುವ ಆರೋಪ ಕೇಳಿ ಬಂದಿದೆ.  ಕನ್ನಡ ಜೀ ವಾಹಿನಿ ಹಾಗೂ ರಾಜು ಕನ್ನಡ ಮೀಡಿಯಂ ನಿರ್ಮಾಪಕ ಕೆ ಎ ಸುರೇಶ್’ಗೆ ಸಿನಿಮಾ ಪ್ರಸಾರ ಆಗದಂತೆ  ಸಿಟಿ ಸಿವಿಲ್ ಕೋರ್ಟ್‌ ನಿಂದ ನೋಟಿಸ್ ಕಳುಹಿಸಿದ್ದಾರೆ.