ಹಾವೇರಿ ಜಿಲ್ಲೆಯಲ್ಲಿ 13 ಶಾಲೆಗಳ ಮಾನ್ಯತೆ ಹಾಗೂ ನೋಂದಣಿಯನ್ನು ಹಿಂದಕ್ಕೆ ಪಡೆಯಲು ಕ್ಷೇತ್ರ ಶಿಕ್ಷಣಾಧಿಕಾರಿ ಹಂತದಲ್ಲಿ ಕ್ರಮ ವಹಿಸಲಾಗಿದೆ.
ಬೆಂಗಳೂರು(ನ.16): ಕನ್ನಡ ಮಾಧ್ಯಮ ಶಾಲೆ ನಡೆಸಲು ಸರ್ಕಾರದ ಅನುಮತಿ ಪಡೆದ 99 ಶಾಲೆಗಳು ಅನಧಿಕೃತವಾಗಿ ಆಂಗ್ಲ ಮಾಧ್ಯಮದಲ್ಲಿ ಶಾಲೆ ನಡೆಸುತ್ತಿವೆ.
ಈ ಶಾಲೆಗಳಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ. ಕಾಂಗ್ರೆಸ್ ಸಹ ಸದಸ್ಯ ಬಿ.ಆರ್.ಪಾಟೀಲ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಬೆಳಗಾವಿ ಜಿಲ್ಲೆಯಲ್ಲಿ ಒಂದು ಶಾಲೆಯ ಮಾನ್ಯತೆ ಹಾಗೂ ನೋಂದಣಿ ಹಿಂದಕ್ಕೆ ಪಡೆಯಲಾಗಿದೆ.
ಹಾವೇರಿ ಜಿಲ್ಲೆಯಲ್ಲಿ 13 ಶಾಲೆಗಳ ಮಾನ್ಯತೆ ಹಾಗೂ ನೋಂದಣಿಯನ್ನು ಹಿಂದಕ್ಕೆ ಪಡೆಯಲು ಕ್ಷೇತ್ರ ಶಿಕ್ಷಣಾಧಿಕಾರಿ ಹಂತದಲ್ಲಿ ಕ್ರಮ ವಹಿಸಲಾಗಿದೆ. ತುಮಕೂರು 6, ಹಾಸನ 19, ಮಂಡ್ಯ 15, ದಕ್ಷಿಣ ಕನ್ನಡ 13, ಬೆಂಗಳೂರು ಗ್ರಾಮಾಂತರ 25,ಬೆಂಗಳೂರು ಉತ್ತರ 7 ಶಾಲೆಗಳು ಕನ್ನಡ ಮಾಧ್ಯಮದ ಪರವಾನಿಗೆ ಪಡೆದು ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸುತ್ತಿವೆ. ಈ 85 ಶಾಲೆಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ ಎಂದರು.
