ಪುಣೆ[ಅ.12]: ಫ್ರಾನ್ಸ್‌ನಲ್ಲಿ ವಿಜಯದಶಮಿ ಹಾಗೂ ಭಾರತೀಯ ವಾಯುಪಡೆ ಸಂಸ್ಥಾಪನಾ ದಿನದಂದು ನಡೆದ ರಫೇಲ್‌ ಯುದ್ಧ ವಿಮಾನ ಸ್ವೀಕಾರ ಕಾರ್ಯಕ್ರಮದಲ್ಲಿ ರಫೇಲ್‌ಗೆ ನಿಂಬೆ ಹಣ್ಣು ಮತ್ತು ತೆಂಗಿನ ಕಾಯಿಯಿಂದ ಪೂಜೆ ಮಾಡಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಕ್ರಮವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸಮರ್ಥಿಸಿಕೊಂಡಿದ್ದಾರೆ.

ರಫೇಲ್‌ ಯುದ್ಧ ವಿಮಾನಕ್ಕೆ ಪೂಜೆ ಮಾಡಿರುವುದು ಮೂಢನಂಬಿಕೆಯ ಸಂಕೇತವಲ್ಲ. ಆದರೆ, ಇದು ಭಾರತೀಯ ಸಂಸ್ಕೃತಿ ಎಂದು ನಿರ್ಮಲಾ ಪ್ರತಿಪಾದಿಸಿದ್ದಾರೆ.

ಈ ಹಿಂದಿನ ರಕ್ಷಣಾ ಸಚಿವ ಹಾಗೂ ಅವರ ಪತ್ನಿ ನೌಕಾಪಡೆಯ ಹಡಗುಗಳ ಉದ್ಘಾಟನೆ ವೇಳೆಯೂ ಅವರು ತಮ್ಮ ಸಂಪ್ರದಾಯ ಪಾಲನೆ ಮಾಡಿದ್ದರು. ಆಗ ಇಲ್ಲದ ಮೂಢ ನಂಬಿಕೆಯ ಚಿಂತೆ ಈಗ ಏಕೆ ಎಂದು ಪ್ರಶ್ನಿಸಿದರು. ಈ ಮೂಲಕ ಮಾಜಿ ರಕ್ಷಣಾ ಸಚಿವ ಎ.ಕೆ ಆ್ಯಂಟನಿ ಹಾಗೂ ಅವರ ಪತ್ನಿ ಪೂಜೆ ಮಾಡಿದ್ದನ್ನು ಪರೋಕ್ಷವಾಗಿ ಪ್ರಸ್ತಾಪ ಮಾಡಿದರು.