Asianet Suvarna News Asianet Suvarna News

ಕಸದ ತೊಟ್ಟಿಯಲ್ಲಿ ಮಕ್ಕಳಿಗೆ ಸಿಕ್ಕವು ಕಂತೆ ಕಂತೆ ನೋಟುಗಳು

ಮಕ್ಕಳು ಪೋಷಕರಿಗೆ ವಿಷಯ ತಿಳಿಸಿದ್ದು, ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

Notes at dust bin

ಕೋಲ್ಕತ್ತಾದ ಫಾಶ್‌ ಗಾಲ್ಫ್‌ ಗ್ರೀನ್‌‌ ಏರಿಯಾದ ಕಸದ ತೊಟ್ಟಿಯಲ್ಲಿ  500 ಹಾಗೂ ಸಾವಿರ ಮುಖಬೆಲೆಯ  ನೋಟುಗಳು ಪತ್ತೆಯಾಗಿವೆ.  ಕಸದ ತೊಟ್ಟಿಯ ಸಮೀಪ ಆಟವಾಡುತ್ತಿದ್ದ ಮಕ್ಕಳಿಗೆ ಎರಡು ಚೀಲದಲ್ಲಿದ್ದ ಹರಿದ ನೋಟುಗಳಿರುವುದು ಕಂಡು ಬಂದಿದೆ. ಕೂಡಲೇ ಮಕ್ಕಳು ಪೋಷಕರಿಗೆ ವಿಷಯ ತಿಳಿಸಿದ್ದು, ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.  ಈ ನೋಟುಗಳನ್ನು ಕೇವಲ ಕೈಯಿಂದ ಹರಿದಿಲ್ಲ. ಕತ್ತರಿಯನ್ನು ಬಳಸಿ ಕತ್ತರಿಸಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.  ಸ್ಥಳಕ್ಕಾಗಮಿಸಿದ ಪೊಲೀಸರು ಈ ಎಲ್ಲಾ ನೋಟುಗಳನ್ನು ವಶಕ್ಕೆ ಪಡೆದಿದ್ದು, ಪರಿಶೀಲನೆಗೆ ಕಳುಹಿಸಿದ್ದಾರೆ. ವಶಕ್ಕೆ ಪಡೆದ ನೋಟುಗಳ ಮೊತ್ತ 2ರಿಂದ 3 ಕೋಟಿ ಇರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios