ನೋಟು ನಿಷೇಧಕ್ಕೆ ಸಂಬಂಧಿಸಿದಂತೆ  ಸುಪ್ರೀಂಕೋರ್ಟ್ ಎದುರು ಕೇಂದ್ರ ಸರ್ಕಾರ ಕಠಿಣ ಪ್ರಶ್ನೆಗಳನ್ನು ಇಂದು ಎದುರಿಸಿತು. ನೋಟು ನಿಷೇಧ ಕ್ರಮದಿಂದ ರಸ್ತೆಗಳಲ್ಲಿ ಹಿಂಸಾಚಾರ ನಡೆಯುತ್ತಿದೆ ಎಂದು ಸುಪ್ರೀಂ ಎಚ್ಚರಿಕೆ ನೀಡಿದೆ.

ನವದೆಹಲಿ (ನ.18) ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಎದುರು ಕೇಂದ್ರ ಸರ್ಕಾರ ಕಠಿಣ ಪ್ರಶ್ನೆಗಳನ್ನು ಇಂದು ಎದುರಿಸಿತು. ನೋಟು ನಿಷೇಧ ಕ್ರಮದಿಂದ ರಸ್ತೆಗಳಲ್ಲಿ ಹಿಂಸಾಚಾರ ನಡೆಯುತ್ತಿದೆ ಎಂದು ಸುಪ್ರೀಂ ಎಚ್ಚರಿಕೆ ನೀಡಿದೆ.

 ನೀವು 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ಹಿಂತೆದುಕೊಂಡ್ಡಿದ್ದೀರಿ. 100 ರೂ. ನೋಟಿನ ಕತೆಯೇನು..? ಎಂದು ಪ್ರತಿದಿನ ಎಟಿಎಂ, ಬ್ಯಾಂಕುಗಳ ಮುಂದೆ ಜನರು ಶಿಕ್ಷೆಗೊಳಪಟ್ಟಂತೆ ಕ್ಯೂ ನಲ್ಲಿ ನಿಲ್ಲುವುದನ್ನು ಆಧರಿಸಿ ಮುಖ್ಯ ನ್ಯಾಯಮೂರ್ತಿ ಸರ್ಕಾರಕ್ಕೆ ಪ್ರಶ್ನಿಸಿದರು.

ನೋಟು ನಿಷೇಧದಿಂದ ಜನರಿಗಾಗುವ ತೊಂದರೆಯನನ್ನು ತಪ್ಪಿಸಲು ಆದಷ್ಟು ಶೀಘ್ರದಲ್ಲಿ ಪರಿಹಾರ ನೀಡುತ್ತೇವೆ ಎಂದಿದ್ದೀರಿ. ಆದರೆ ಇದೀಗ ಹಣ ವಿತ್ ಡ್ರಾ ಮಿತಿಯನ್ನು 2 ಸಾವಿರಕ್ಕಿಳಿಸಿದ್ದೀರಿ. ಇದು ಪ್ರಿಂಟಿಂಗ್ ಸಮಸ್ಯೆಯಾ ? ಎಂದು ನ್ಯಾಯಮೂರ್ತಿಯವರು ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ, ಇದು ಪ್ರಿಂಟಿಂಗ್ ಸಮಸ್ಯೆಯಲ್ಲ. ದೇಶಾದ್ಯಂತ ಇರುವ ಲಕ್ಷಗಟ್ಟಲೆ ಶಾಖೆಗೆ ಹಣ ವರ್ಗಾವಣೆ ಮಾಡುವುದು ಕಷ್ಟವಾಗಿದೆ. ಜೊತೆಗೆ ಎಟಿಎಂನನ್ನು ಮರು ಹೊಂದಾಣಿಕೆ ಮಾಡಬೇಕಾಗಿದೆ. ಹಾಗಾಗಿ ಹಣದ ಮಿತಿಯನ್ನು ಕಡಿಮೆ ಮಾಡಲಾಗಿದೆ ಎಂದಿದ್ದಾರೆ.

ಇದೇ ವೇಳೆ ನೋಟು ನಿಷೇಧ ಸಂಬಂಧಿಸಿ ಬೇರೆ ಬೇರೆ ನ್ಯಾಯಾಲಯಗಳಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ತಡೆಯಾಜ್ಞೆ ವಿಧಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. 

ನೋಟು ಅಪಮೌಲ್ಯೀಕರಣದ ವಿರುದ್ಧ ನ್ಯಾಯಾಲಯಗಳಲ್ಲಿ ಸಲ್ಲಿಸಲಾಗಿರುವ ಎಲ್ಲಾ ಅರ್ಜಿಗಳಿಗೆ ತಡೆಯಾಜ್ಞೆ ನೀಡುವಂತೆ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಮುಕುಲ್ ರೊಹ್ತಗಿ ಸುಪ್ರೀಂ ಕೋರ್ಟ್’ಗೆ ಮನವಿ ಸಲ್ಲಿಸಿದ್ದರು.