ಕೇಂದ್ರ ಸಚಿವ ಸದಾನಂದಗೌಡರಿಗೂ ನೋಟ್ ಬ್ಯಾನ್ ಬಿಸಿ ತಟ್ಟಿದೆ. ಸಹೋದರನ ಮೃತದೇಹ ಪಡೆಯಲು ಡಿವಿಎಸ್ ಆಸ್ಪತ್ರೆಗೆ ಬಂದಿದ್ದರು. ಈ ಸಂದರ್ಭ, ಹಳೆ ನೋಟುಗಳನ್ನ ಪಡೆಯಲು ಮಂಗಳೂರಿನ ಕೆಎಂಸಿ ಆಸ್ಪತ್ರೆ ಆಡಳಿತ ಮಂಡಳಿ ನಿರಾಕರಿಸಿದ್ದರು. ಹಳೆ ನೋಟು ಪಡೆಯದಿದ್ದಕ್ಕೆ ಆಸ್ಪತ್ರೆ ವಿರುದ್ಧ ಸದಾನಂದಗೌಡ ಗರಂ ಆಗಿದ್ದರು.
ಮಂಗಳೂರು(ನ.22): ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರ ಸಹೋದರ ಡಿ.ವಿ. ಭಾಸ್ಕರ್ ಮೃತಪಟ್ಟಿದ್ದಾರೆ. ಪಿತ್ತಕೋಶ ವೈಫಲ್ಯದಿಂದ ನರಳುತ್ತಿದ್ದ ಅವರು ಕೆಲವು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾದರು. ಮೃತರ ನಿಧನವನ್ನು ದೃಢಪಡಿಸಿದ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಸಹೋದರ ಅಗಲುವಿಕೆ ದುಃಖ ತಂದಿದೆ. ಮಂಡೆಕೋಲಿನ ಮನೆಯ ಆಧಾರಸ್ತಂಬವಾಗಿದ್ದರು ಎಂದು ಹೇಳಿದರು.
ಸಚಿವ ಕೃಷ್ಣ ಪಾಲೇಮಾರ್ ಸಹಿತ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಮೃತರಿಗೆ ಅಂತಿಮ ನಮನ ಸಲ್ಲಿಸಿದರು. ಸಾರ್ವಜನಿಕರ ವೀಕ್ಷಣೆಗೆ ಅನುವು ಮಾಡಿಕೊಟ್ಟ ಬಳಿಕ ಮೃತದೇಹವನ್ನು ಹುಟ್ಟೂರು ಸುಳ್ಯದ ಮಂಡೆಕೋಲಿಗೆ ಕೊಂಡೊಯ್ಯಲಾಯಿತು.
ಈ ಮಧ್ಯೆ, ಕೇಂದ್ರ ಸಚಿವ ಸದಾನಂದಗೌಡರಿಗೂ ನೋಟ್ ಬ್ಯಾನ್ ಬಿಸಿ ತಟ್ಟಿದೆ. ಸಹೋದರನ ಮೃತದೇಹ ಪಡೆಯಲು ಡಿವಿಎಸ್ ಆಸ್ಪತ್ರೆಗೆ ಬಂದಿದ್ದರು. ಈ ಸಂದರ್ಭ, ಹಳೆ ನೋಟುಗಳನ್ನ ಪಡೆಯಲು ಮಂಗಳೂರಿನ ಕೆಎಂಸಿ ಆಸ್ಪತ್ರೆ ಆಡಳಿತ ಮಂಡಳಿ ನಿರಾಕರಿಸಿದ್ದರು. ಹಳೆ ನೋಟು ಪಡೆಯದಿದ್ದಕ್ಕೆ ಆಸ್ಪತ್ರೆ ವಿರುದ್ಧ ಸದಾನಂದಗೌಡ ಗರಂ ಆಗಿದ್ದರು.
