ದೇಶಾದ್ಯಂತ ನಡೆಯುತ್ತಿರುವ ಐಟಿ ದಾಳಿಗಳಿಗೆ ಪಂಚರಾಜ್ಯಗಳ ಚುನಾವಣೆ ಸ್ಪರ್ಧಿಗಳು ಬೆದರಿದ್ದಾರೆ ಅಂದರೆ ಅಕ್ಷರಶಃ ತಪ್ಪಾಗಲಾರದು. ಚುನಾವಣೆ ಪ್ರಚಾರಕ್ಕೆ ಹೆಲಿಕಾಫ್ಟರ್ ಬಳುಸುತ್ತಿದ್ದ ರಾಜಕೀಯ ನಾಯಕರು ಇದೀಗ ನಟರಾಜ ಸರ್ವಿಸ್ ನತ್ತ ಮುಖ ಮಾಡಿದ್ದಾರೆ. ಇದನ್ನು ಖುದ್ದು  ರಾಜಕೀಯ  ನಾಯಕರೇ ಒಪ್ಪಿಕೊಂಡಿದ್ದಾರೆ. ಹೀಗಾಗಿ ಕಾಲ್ನಡಿಗೆಯಲ್ಲಿ ಮನೆ ಮನೆಗಳಿಗೆ ತೆರಳಿ ಪ್ರಚಾರ ನಡೆಸುತ್ತಿದ್ದು ಐಷಾರಾಮಿ ಪ್ರಚಾರದಿಂದ ದೂರ ಸರಿದಿದ್ದಾರೆ.

ನವದೆಹಲಿ(ಜ.09): ನೋಟ್ ಬ್ಯಾನ್ ಎಫೆಕ್ಟ್ ಇಡೀ ದೇಶದ ಜನರನ್ನ ಅಯೋಮಯ ಮಾಡಿರುವುದರಲ್ಲಿ ಎರಡು ಮಾತಿಲ್ಲಾ. ಇದೀಗ ಅದು ರಾಜಕಾರಣಿಗಳ ಬುಡಕ್ಕೂ ಬಂದಿದೆ. ಹಾಗಿದ್ದರೆ, ಇದು ಸದ್ಯ ಯಾರ ಬುಡಕ್ಕೆ ಬಂದಿದೆ ಅಂತೀರಾ ಇಲ್ಲಿದೆ ವಿವರ.

Add Asianetnews Kannada as a Preferred SourcegooglePreferred

ಪಂಚ ರಾಜ್ಯಗಳ ಚುನಾವಣೆಗೂ ತಟ್ಟಿದ ನೋಟ್ ಬ್ಯಾನ್ ಬಿಸಿ

ದೇಶಾದ್ಯಂತ ನಡೆಯುತ್ತಿರುವ ಐಟಿ ದಾಳಿಗಳಿಗೆ ಪಂಚರಾಜ್ಯಗಳ ಚುನಾವಣೆ ಸ್ಪರ್ಧಿಗಳು ಬೆದರಿದ್ದಾರೆ ಅಂದರೆ ಅಕ್ಷರಶಃ ತಪ್ಪಾಗಲಾರದು. ಚುನಾವಣೆ ಪ್ರಚಾರಕ್ಕೆ ಹೆಲಿಕಾಫ್ಟರ್ ಬಳುಸುತ್ತಿದ್ದ ರಾಜಕೀಯ ನಾಯಕರು ಇದೀಗ ನಟರಾಜ ಸರ್ವಿಸ್ ನತ್ತ ಮುಖ ಮಾಡಿದ್ದಾರೆ. ಇದನ್ನು ಖುದ್ದು ರಾಜಕೀಯ ನಾಯಕರೇ ಒಪ್ಪಿಕೊಂಡಿದ್ದಾರೆ. ಹೀಗಾಗಿ ಕಾಲ್ನಡಿಗೆಯಲ್ಲಿ ಮನೆ ಮನೆಗಳಿಗೆ ತೆರಳಿ ಪ್ರಚಾರ ನಡೆಸುತ್ತಿದ್ದು ಐಷಾರಾಮಿ ಪ್ರಚಾರದಿಂದ ದೂರ ಸರಿದಿದ್ದಾರೆ.

ಖಾಸಗಿ ವಿಮಾನಯಾನ ಸಂಸ್ಥೆಗಳ ಆದಾಯಕ್ಕೆ ಹೊಡೆತ

ಪಂಚರಾಜ್ಯ ಚುನಾವಣೆಗಳ ಪ್ರಚಾರಕ್ಕೆ ಹೆಲಿಕಾಫ್ಟರ್ ಪೂರೈಸುತ್ತಿದ್ದ ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಭಾರೀ ಪೆಟ್ಟು ಬಿದ್ದಿದೆ. ಮುಂಗಡ ಹಣ ಪಾವತಿಸಿ ಹೆಲಿಕಾಫ್ಟರ್ ಬುಕ್ ಮಾಡಿದ್ದ ನಾಯಕರು ಅದನ್ನು ಖಚಿತಪಡಿಸದೇ ಹಿಂದೆ ಸರಿದಿದ್ದಾರೆ. ಕಾರ್ಡ್​ ಅಥವಾ ಚೆಕ್ ನೀಡಿ ಹಣ ಪಾವತಿಸಲು ಅವಕಾಶ ಕಲ್ಪಿಸಿದ್ದರೂ ಚುನಾವಣಾ ಸ್ಫರ್ಧಿಗಳು ಹೆಲಿಕಾಫ್ಟರ್ ಬಳಸಿಕೊಳ್ಳಲು ಮುಂದಾಗದಿರುವುದು ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ನುಂಗಲಾರದ ತುತ್ತಾಗಿದೆ.

ಒಂದು ಬಾರಿ ಹೆಲಿಕಾಫ್ಟರ್ ಬಳಸಬೇಕೆಂದರೆ ಅದಕ್ಕೆ ಬರೋಬ್ಬರಿ 1 ಲಕ್ಷ ವೆಚ್ಚ ತಗಲುತ್ತದೆ. ಅದಕ್ಕೆ 15 ಪರ್ಸೆಂಟ್ ತೆರಿಗೆ ಹಾಗೂ ಅದರಲ್ಲಿ ಆಹಾರ ಮತ್ತು ಅದರ ನಿರ್ವಾಹಣೆ ಸೇರಿದ್ರೆ 1.75 ಲಕ್ಷ ಆಗುತ್ತೆ. ಅಷ್ಟೆ ಅಲ್ಲದೆ ನಾವು ಪ್ರಚಾರಕ್ಕೆ ತೆರಳುವ ಮಾರ್ಗದಲ್ಲಿ ವಿಮಾನಗಳಿಗೆ ಬಳುಸುವ ತೈಲಗಳು ಸಿಗುವುದಿಲ್ಲ ,ಇದರಿಂದಾಗಿ ನಾವು ಇಂಧನ ಪೂರೈಕೆಗಾಗಿ ದೆಹಲಿ, ಲಖನೌ ಮತ್ತು ಚಂಡೀಗಡಕ್ಕೆ ತೆರಳಬೇಕಿರುವುದರಿಂದ ಪ್ರಯಾಣದ ದರ ಮತ್ತಷ್ಟು ದುಬಾರಿಯಾಗುತ್ತದೆ ಎಂದು ರಾಜಕೀಯ ನಾಯಕರು ಹೇಳುತ್ತಿದ್ದಾರೆ.

ಒಟ್ಟಾರೆ ಚುನಾವಣಾ ಆಯೋಗ , ಐಟಿ ಅಧಿಕಾರಿಗಳ ಭೀತಿಯಿಂದ ರಾಜಕೀಯ ನಾಯಕರು ದುಬಾರಿ ಪ್ರಯಾಣ ಎಂಬ ನೆಪವೊಡ್ಡಿ ಐಷರಾಮಿ ಪ್ರಚಾರಕ್ಕೆ ಬ್ರೇಕ್ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಮೋದಿ ನೋಟ್ ಬ್ಯಾನ್ ನಿರ್ಧಾರ ಬಿಸಿ ಮುಟ್ಟಿಸಿರುವುರದಲ್ಲಿ ಅನುಮಾನವಿಲ್ಲ.