ಕಾರವಾರ(ಅ.6): ಗೋಕರ್ಣ ದೇವಸ್ಥಾನವನ್ನು ಸರ್ಕಾರದ ವಶಕ್ಕೆ ಪಡೆಯುವ ಕುರಿತು ಸರ್ಕಾರ ಚಿಂತಿಸಿಲ್ಲ ಎಂದು ಉನ್ನತ ಶಿಕ್ಷಣ ಹಾಗೂ ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.

ಕಾರವಾರಕ್ಕೆ ಆಗಮಿಸಿದಾಗ ಸುವರ್ಣ ನ್ಯೂಸ್'ನೊಂದಿಗೆ ಮಾತನಾಡಿದ ಅವರು, ರಾಮಚಂದ್ರಾಪುರ ಮಠ ಒಳ್ಳೆಯ ಕೆಲಸ ಮಾಡುತ್ತಿದೆ. ಅವರೇ ಆಡಳಿತ ನಡೆಸಲೆಂದು ಸಿಎಂಗೆ ಸಲಹೆ ಕೂಡ ನೀಡಲಾಗಿದೆ. ಆಡಳಿತಾಧಿಕಾರಿಯನ್ನು ನೇಮಿಸುವ ಚಿಂತನೆಯೂ ಇಲ್ಲ. ಭಕ್ತರು ಅನವಶ್ಯಕವಾಗಿ ಗೊಂದಲ ಮಾಡಿಕೊಳ್ಳುವುದು ಬೇಡ. ದೇಗುಲವನ್ನು ವಶಕ್ಕೆ ಪಡೆಯುವ ಚಿಂತನೆ ಇಲ್ಲ ಎಂದು ಸಿಎಂ ಅವರೇ ತಿಳಿಸಿದ್ದಾರೆ' ಎಂದು ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.