ಬೆಂಗಳೂರು : ಸರ್ಕಾರದಿಂದ ಮಾನಸಿಕವಾಗಿ ದೂರವೇ ಉಳಿದಿರುವ ಸಚಿವ ರಮೇಶ್ ಜಾರಕಿಹೊಳಿ ಬೆಳಗಾವಿ ಅಧಿವೇಶನಕ್ಕೂ ಕೂಡ ಗೈರಾಗಲಿದ್ದಾರೆ ಎನ್ನಲಾಗುತ್ತಿದೆ. 

ಈ ನಿಟ್ಟಿನಲ್ಲಿ ರಮೇಶ್ ಜಾರಕಿಹೊಳಿ ನಡೆ ಸಾಕಷ್ಟು ಕುತೂಹಲ ಮೂಡಿಸಿದೆ.  ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಜಾರಕಿಹೊಳಿ  ಬೆಳಗಾವಿಯಲ್ಲಿ ಸೋಮವಾರದಿಂದ ನಡೆಯುತ್ತಿರುವ ಅಧಿವೇಶನದಲ್ಲಿ ಯಾವುದೇ ರೀತಿ ಉತ್ಸಾಹವನ್ನೂ ಕೂಡ ತೋರಿಸುತ್ತಿಲ್ಲ. 

ಅಧಿವೇಶನದ ಹಿನ್ನೆಲೆಯಲ್ಲಿ ಬೆಳಗಾವಿಗೆ ತೆರಳಿದ ಸಿಎಂ ಮತ್ತು ಸಚಿವರನ್ನು ಸ್ವಾಗತಿಸಲೂ ವಿಮಾನ ನಿಲ್ದಾಣಕ್ಕೆ ಆಗಮಿಸದ ಸಚಿವ ಜಾರಕಿಹೋಳಿ ಅಧಿವೇಶನಕ್ಕೆ ಆಗಮಿಸುವುದು ಅನುಮಾನವಾಗಿದೆ. 

ಬೆಳಗಾವಿ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಸಂಪೂರ್ಣ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಆದರೆ ಉಸ್ತುವಾರಿ ಸಚಿವರು ಮಾತ್ರ ಈ ನಿಟ್ಟಿನಲ್ಲಿ ಆಸಕ್ತಿ ತೋರುತ್ತಿಲ್ಲ. 

ಕಳೆದ 10 ಸಂಪುಟ ಸಭೆಗಳಿಗೆ ಗೈರಾದ ರಮೇಶ್ ಜಾರಕಿಹೊಳಿ ಇದೀಗ ಅಧಿವೇಶನಕ್ಕೂ ಕೂಡ ಗೈರಾಗುತ್ತಿದ್ದಾರೆ ಎನ್ನಲಾಗುತ್ತಿದೆ.

ಕಾಂಗ್ರೆಸ್‌ಗೆ ಗುಡ್ ಬೈ ಹೇಳಿ ಬಿಜೆಪಿಯತ್ತ ಸಚಿವ..?

ನನ್ನ ವಿರುದ್ಧ ಕಾಂಗ್ರೆಸಿಗನ ಷಡ್ಯಂತ್ರ: ಜಾರಕಿಹೊಳಿ ಹೇಳಿದ ನಾಯಕ ಯಾರು?