ರಾಜ್ಯ ರಾಜಕಾರಣದಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ರೀತಿಯ ಬೆಳವಣಿಗೆಗಳಾಗುತ್ತಿದೆ. ಈ ಸಂಬಂಧ ಇದೀ ಪ್ರತಿಕ್ರಿಯಿಸಿದ ಸತೀರಶ್ ಜಾರಕಿಹೊಳಿ ಅವರು ಇದರಲ್ಲಿ ತಮ್ಮ ಪಾತ್ರವಿಲ್ಲ ಎಂದು ಹೇಳಿದ್ದಾರೆ. 

ಬೆಳಗಾವಿ : ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಲ್ಲಿ ನನ್ನ ಯಾವುದೇ ರೀತಿಯ ಪಾತ್ರವಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಎಲ್ಲವೂ ಕೂಡ ರಮೇಶ್ ಜಾರಕಿಹೊಳಿ ಅವರದ್ದೇ ಎನ್ನುವ ವಿಚಾರವನ್ನು ಅವರು ತಿಳಿಸಿದ್ದಾರೆ. ಆದ್ದರಿಂದ ಅವರನ್ನೇ ಈ ಸಂಬಂಧ ಪ್ರಶ್ನೆ ಮಾಡಿ ಎಂದು ಅವರು ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನು ಪಕ್ಷ ಎಂದಮೇಲೆ ಅಸಮಾಧಾನ ಎನ್ನುವುದು ಸಾಮಾನ್ಯ ಸಂಗತಿಯಾಗಿರುತ್ತದೆ. ಹಾಗೆಯೇ ನಮ್ಮಲ್ಲಿಯೂ ಕೂಡ ಸಮಸ್ಯೆ ಇದೆ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಬಳಿಯಲ್ಲಿ ಮಾತನಾಡಿದ್ದೇವೆ, ಹಬ್ಬವೆಲ್ಲ ಮುಕ್ತಾಯವಾದ ನಂತರ ಮತ್ತೊಮ್ಮೆ ಮಾತುಕತೆ ನಡೆಸುವುದಾಗಿಯೂ ಅವರು ಹೇಳಿದ್ದಾರೆ.

ಇನ್ನು ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಮೂರು ಜಿಲ್ಲೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಈ ವಿಚಾರ ಈಗಿನದ್ದಲ್ಲ. ಇದು ಅತ್ಯಂತ ಹಳೆಯ ವಿಚಾರವಾಗಿದೆ. ಕಳೆದ 20 ವರ್ಷಗಳಿಂದಲೂ ಕೂಡ ವಿಭಜನೆ ಬಗ್ಗೆ ಬೇಡಿಕೆ ಇದೆ. ಅದು ನಮ್ಮ ಬೇಡಿಕೆಯೂ ಕೂಡ ಹೌದು. 

ಆಪರೆಷನ ಕಮಲವೂ ಸರ್ಕಾರ ರಚನೆ ಆದಾಗಿನಿಂದಲೂ ಕೂಡ ಇದೆ. ನಮ್ಮ ಜಿಲ್ಲೆಯಲ್ಲಿ ಅಸಮಾಧಾನ ಇದೆ ಹೌದು. ಆದರೆ ಈ ಬಗ್ಗೆ ಬೇರೆಯವರು ತಲೆ ಹಾಕಬಾರದು ಎಂದು ಅವರು ಹೇಳಿದ್ದಾರೆ.